Saturday, April 17, 2021

ಭಾರೀ ವೈರಲ್ ಆಯ್ತು ಮಾಜಿ ಪ್ರಧಾನಿ ಅಟಲ್ ವಿಡಿಯೋ

ನವದೆಹಲಿ: ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ತಮ್ಮ ಮತ್ತು ನೆಹರು ನಡುವಿನ ಆತ್ಮೀಯತೆ ಬಗ್ಗೆ ಸಂಸತ್ ನಲ್ಲಿ ಮಾಡಿದ ಭಾಷಣದ ವಿಡಿಯೋವೊಂದು ಈಗ ಭಾರೀ ವೈರಲ್ ಆಗಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೆಹರು ಅವರನ್ನು ಜಗತ್ತಿನ ಪ್ರಸಿದ್ಧ ವ್ಯಕ್ತಿಗಳಾದ ವಿನ್ ಸ್ಟನ್ ಚರ್ಚಿಲ್ ಮತ್ತು ನೆವಿಲ್ಲೆ ಚೇಂಬರ್ಲಿನ್’ಗೆ ಹೋಲಿಸಿದ ವಿಡಿಯೋವನ್ನು ಇತಿಹಾಸಕಾರ‌ ರಾಮಚಂದ್ರ ಗುಹ ಅವರು ಈ ವಿಡಿಯೋವನ್ನು ಟ್ವಿಟ್ಟರ್’ನಲ್ಲಿ ಹಾಕಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
‘ನಾನಿನ್ನೂ ಆಗ ಹೊಸಬ. ಸಂಸತ್ ನಲ್ಲಿ ಮಾತಿಗೆ ಅವಕಾಶ ಸಿಗುತ್ತಿದ್ದುದೇ ಕಡಿಮೆ. ಅದಕ್ಕಾಗಿ ಸಭಾತ್ಯಾಗ ಮಾಡಿದ್ದೂ ಇದೆ. ಒಮ್ಮೆ ಅವಕಾಶ ಸಿಕ್ಕಾಗ ನೆಹರು ಅವರನ್ನು ಕುರಿತೇ ಮಾತನಾಡಿದ್ದೆ. ನಿಮ್ಮೊಳಗೆ ಚರ್ಚಿಲ್ ಕೂಡ ಇದ್ದಾನೆ, ಚಂಬರ್ಲಿನ್ ಸಹ ಇದ್ದಾನೆ ಎಂದು ಟೀಕಿಸಿದ್ದೆ‌. ಆದರೆ, ನೆಹರು ಕೋಪಿಸಿಕೊಂಡಿರಲಿಲ್ಲ. ಸಂಜೆ ಔತಣಕೂಟದಲ್ಲಿ ಸಿಕ್ಕಾಗ ನನ್ನ ಭಾಷಣವನ್ನು ಅವರು ಹೊಗಳಿ, ಮುಗುಳ್ನಗೆ ಬೀರಿ ಹೊರಟಿದ್ದರು.’
‘ನಾನು ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಮಂತ್ರಿಯಾಗಿದ್ದಾಗ ಸಚಿವಾಲಯದ ದಕ್ಷಿಣ ಬ್ಲಾಕ್ ನಲ್ಲಿದ್ದ ನೆಹರು ಅವರ ಚಿತ್ರಪಟವನ್ನು ಯಾರೋ ತೆಗೆದಿದ್ದರು. ಇದನ್ನು ಕಂಡ ನಾನು, ಚಿತ್ರಪಟವೆಲ್ಲಿ? ತೆಗೆದಿದ್ದು ಯಾಕೆ ಎಂದು ಕೋಪದಲ್ಲೇ ಕೇಳಿದ್ದೆ. ಯಾರಿಂದಲೂ ಉತ್ತರ ಬರಲಿಲ್ಲ. ಆದರೆ, ಮರುದಿನವೇ ಚಿತ್ರಪಟ ಅದೇ ಜಾಗದಲ್ಲಿತ್ತು. ಇದನ್ನು ಹೇಳಿದರೆ, ಕಾಂಗ್ರೆಸಿಗರೂ ನಂಬುವುದಿಲ್ಲ. ಈಗ ಇಂತಹ ಟೀಕೆಗಳನ್ನು ಮಾಡಿದರೆ, ಹಗೆತನ ಕಟ್ಟಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿ ಇದೆ ಎಂದು ವಾಜಪೇಯಿ ಹೇಳಿದ್ದರು. ಈ ವಿಡಿಯೋ ರಾಮಚಂದ್ರ ಗುಹ ಅವರಲ್ಲದೆ, ಶಶಿ ತರೂರ್ ಸೇರಿ ಹಲವರು ರೀಟ್ವೀಟ್ ಮಾಡಿದ್ದಾರೆ.

https://twitter.com/i/status/1279628083805356032

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!