newsics.com
ಲಖಿಂಪುರ: ಕಾಲೇಜಿಗೆ ತೆರಳಿದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಲಖಿಂಪುರ ಸಮೀಪದ ಮೊಹಲ್ಲ ಹಿದಾಯತ್ ನಗರದಲ್ಲಿ ಈ ಪ್ರಕರಣ ವರದಿಯಾಗಿದೆ. ನಾಲ್ವರು ವಿದ್ಯಾರ್ಥಿನಿಯರು ಒಂದೇ ಕಾಲೇಜಿನಲ್ಲಿ ಕಲಿಯುತ್ತಿದ್ದರು.
ಆರ್ಯ ಕನ್ಯಾ ಕಾಲೇಜಿನ ಈ ನಾಲ್ವರು ವಿದ್ಯಾರ್ಧಿನಿಯರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇದು ಆತಂಕ ಸೃಷ್ಟಿಸಿದೆ.
ವಿದ್ಯಾರ್ಥಿನಿಯರು ಬಟ್ಟೆ ಅಂಗಡಿಗೆ ತೆರಳಿ ಬಟ್ಟೆ ಖರೀದಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾಗಿದೆ.
ವಿದ್ಯಾರ್ಥಿನಿಯರ ಪತ್ತೆಗೆ ವಿಶೇಷ ದಳ ರಚಿಸಲಾಗಿದೆ.
ಶೀಘ್ರವೇ ವಿದ್ಯಾರ್ಥಿನಿಯರನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ