newsics.com
ಚತ್ತೀಸಘಡ: ನಾಲ್ಕು ಗಂಟೆ ವಿದ್ಯುತ್ ಕಡಿತದಿಂದ ಆಸ್ಪತ್ರೆಯಲ್ಲಿ ಆಗಷ್ಟೇ ಹುಟ್ಟಿದ ನಾಲ್ಕು ಕಂದಮ್ಮಗಳ ಸಾವಿಗೆ ಕಾರಣವಾಗಿದೆ.
ಈ ಘಟನೆ ನಡೆದಿರುವುದು ಚತ್ತೀಸಘಡದ ರಾಜಧಾನಿ ರಾಯ್ಪುರ ಅಂಬಿಕಾಪುರ್ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದಿದೆ.
ಬೆಳಗ್ಗೆ 5.30ಕ್ಕೆ ವಿದ್ಯುತ್ ಕಡಿತಗೊಂಡಿದೆ. ಹೀಗೆ ವಿದ್ಯುತ್ ಕಡಿತಗೊಂಡಾದ 10 ರಿಂದ 15 ನಿಮಿಷದಲ್ಲಿ ಮತ್ತೆ ಬರುತ್ತಿತ್ತು. 20 ನಿಮಿಷವಾದರೂ ವಿದ್ಯುತ್ ಕಡಿತ ಮುಂದುವರಿದಾಗ ಆಸ್ಪತ್ರೆ ಸಿಬ್ಬಂದಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಬೆಳಗ್ಗೆ 8.30ರ ವರೆಗೆ ವಿದ್ಯುತ್ ಕಡಿತಗೊಂಡಿತ್ತು. ಇದರಿಂಂದ ಆಗಷ್ಟೇ ಹುಟ್ಟಿದ ಪುಟ್ಟ ಕಂದಮ್ಮ ಸೇರಿ ನಾಲ್ಕು ಮಕ್ಕಳು ದಾರುಣ ಸಾವು ಕಂಡಿದೆ.