ಕಾಸರಗೋಡು: ಒಂದೇ ಕುಟುoಬದ ನಾಲ್ವರನ್ನು ಕೊಲೆ ಮಾಡಿದ ಘಟನೆಯೊಂದು ಕರ್ನಾಟಕದ ಗಡಿ ಪ್ರದೇಶದಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆ ಮಂಜೇಶ್ವರದ ಬಾಯಾರುವಿನ ಕನ್ಯಾಲ ಎಂಬಲ್ಲಿ ಸೋಮವಾರ ರಾತ್ರಿ 7.30ರ ಹೊತ್ತಿಗೆ ಈ ಘಟನೆ ನಡೆದಿದ್ದು, ಸುದಂಬಲದ ಉದಯ (40) ಕೊಲೆ ನಡೆಸಿದ ಆರೋಪಿ. ಕೊಲೆಯಾದವರೆಲ್ಲ ಆರೋಪಿ ಉದಯನ ಸಂಬಂಧಿಗಳಾಗಿದ್ದಾರೆ.
ಆರೋಪಿಯನ್ನು ಊರವರೇ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಲೆಗೀಡಾದವರನ್ನು ಆರೋಪಿ ಉದಯನ ತಾಯಿಯ ಸಹೋದರರಾದ ಸದಾಶಿವ (54), ವಿಠಲ (52), ಬಾಬು (50), ತಾಯಿಯ ಸಹೋದರಿ ರೇವತಿ (58) ಎಂದು ತಿಳಿದುಬಂದಿದೆ.
ರಾಮಮಂದಿರ ಭೂಮಿಪೂಜೆಗೆ ಮುಹೂರ್ತ ನೀಡಿದ್ದ ವಿದ್ವಾಂಸರಿಗೆ ಬೆದರಿಕೆ ಕರೆ
ಕುಟುoಬ ಕಲಹದಲ್ಲಿ ಉಂಟಾದ ವಾಗ್ವಾದವೇ ಕೊಲೆಗೆ ಕಾರಣವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಸ್ಥಳಕ್ಕಾಗಮಿಸಿದ ಕಾಸರಗೋಡು ಡಿ.ವೈ.ಎಸ್.ಪಿ ಬಾಲಕೃಷ್ಣನ್ ನೇತೃತ್ವದ ಪೋಲೀಸರ ತಂಡ ಆರೋಪಿಯನ್ನು ವಶಕ್ಕೆ ಪಡೆದಿದೆ.