Monday, September 20, 2021

ಕಾಶ್ಮೀರ ಪೋಸ್ಟರ್ ವಿವಾದ: ಪ್ರಕರಣ ಕೈ ಬಿಡಲು ಪೊಲೀಸರ ಚಿಂತನೆ

Follow Us

ಮುಂಬೈ:  ಪೌರತ್ವ ಕಾನೂನು ತಿದ್ದುಪಡಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಪ್ರದರ್ಶಿಸಲಾದ ಫ್ರೀ ಕಾಶ್ಮೀರ ಫಲಕ ಕುರಿತ ಪ್ರಕರಣ ಕೊನೆಗೊಳಿಸಲು ಮುಂಬೈ ಪೊಲೀಸರು ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಅಗತ್ಯ ಕಾನೂನು ಸಲಹೆ ಪಡೆದು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.  ಜನವರಿ 7ರಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮೆಹರ್ ಮಿರ್ಜಾ ಪ್ರಭು ಎಂಬ ಯುವತಿ ಈ ವಿವಾದಾತ್ಮಕ ಫಲಕ ಪ್ರದರ್ಶಿಸಿದ್ದಳು. ಇದು ತೀವ್ರ  ಆಕ್ರೋಶಕ್ಕೆ ಕಾರಣವಾಗಿತ್ತು. ಯುವತಿಯ ಸಾಮಾಜಿಕ ಜಾಲ ತಾಣಗಳ ಅಕೌಂಟ್ ಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಯಾವುದೇ ದುರುದ್ದೇಶ ಚಟುವಟಿಕೆ ಪತ್ತೆಯಾಗಿಲ್ಲ. ಇದನ್ನೆಲ್ಲ ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಮಾರಾಟಕ್ಕಿದೆ ವಿರಾಟ್​ ಕೊಹ್ಲಿ ಬಳಸಿದ ದುಬಾರಿ ಲ್ಯಾಂಬೋರ್ಗಿನಿ ಕಾರು

newsics.com ಕೊಚ್ಚಿ (ಕೇರಳ): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಸಿದ ಲ್ಯಾಂಬೋರ್ಗಿನಿ ಕಾರು 1.35 ಕೋಟಿ ರೂ.ಗೆ ಮಾರಾಟಕ್ಕೆ ಲಭ್ಯವಿದೆ. ಕಿತ್ತಳೆ ಬಣ್ಣದ ಲ್ಯಾಂಬೋರ್ಗಿನಿ ಗಲ್ಲಾರ್ಡೋ...

ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ

newsics.com ರಾಜಸ್ಥಾನ: ತನ್ನ ನಾಲ್ಕು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ವಿಷ ನೀಡಿ, ನೀರಿನ ತೊಟ್ಟಿಗೆ ಎಸೆದ ತಂದೆಯೊಬ್ಬ ತಾನು ಕೂಡಾ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. ಐದು ತಿಂಗಳ ಹಿಂದೆಯಷ್ಟೇ...

ತೋಟಕ್ಕೆ ಕರೆದು ಸಾಮೂಹಿಕ ಅತ್ಯಾಚಾರ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಾಮುಕರು

newsics.com ಉತ್ತರ ಪ್ರದೇಶ: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕಾಮುಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. ಆರೋಪಿಗಳಾದ ಶುಭಂ ಹಾಗೂ ಆಶಿಶ್​ ಎಂಬವರ ಮೇಲೆ...
- Advertisement -
error: Content is protected !!