newsics.com
ನವದೆಹಲಿ: ದಿನಪತ್ರಿಕೆ ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಆಹಾರಗಳನ್ನು ಹಾಕಿ ಕೊಡುವುದು, ಕಟ್ಟಿ ಕೊಡುವುದು, ಸಂಗ್ರಹಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರಾಟಗಾರರಿಗೆ ತಿಳಿಸಿದೆ.
ಆಹಾರಗಳನ್ನು ಪತ್ರಿಕೆಗಳಲ್ಲಿಟ್ಟು ಕೊಡುವುದು, ಸಂಗ್ರಹಿಸುವುದು ಅನೇಕ ಜನರಲ್ಲಿ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಹೀಗಾಗಿ ಮಾರಾಟಗಾರರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು FSSAI ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಮಲಾ ವರ್ಧನಾ ರಾವ್ ಅವರು ಆದೇಶಿಸಿದ್ದಾರೆ.
ಆಹಾರಗಳನ್ನು ಹಾಕಿ ಕೊಡಲು, ಸಂಗ್ರಹಿಸಲು ಪತ್ರಿಕೆಗಳನ್ನು ಬಳಸಬಾರದು. ಬದಲಿಗೆ ಆರೋಗ್ಯಕರ ಉತ್ಪನ್ನಗಳನ್ನು ಬಳಸಬೇಕು ಎಂದು ಮಾರಾಟಗಾರರಿಗೆ ಸಲಹೆ ನೀಡಿದೆ. ಈ ನಿಯಮಾವಳಿಯನ್ನು FSSAI, ರಾಜ್ಯ ಆಹಾರ ಸುರಕ್ಷತೆ ಸಕ್ಷಮ ಪ್ರಾಧಿಕಾರಗಳ ಜೊತೆ ಜಂಟಿಯಾಗಿ ನಿಗಾ ಇಡಲಿದೆ ಎಂದು ಹೇಳಿದ್ದಾರೆ.
ವಾಕ್ ಸ್ವಾತಂತ್ರ್ಯದ ಬಗ್ಗೆ ಭಾರತ ಇತರರಿಂದ ಕಲಿಯಬೇಕಾಗಿಲ್ಲ: ಗುಡುಗಿದ ವಿದೇಶಾಂಗ ಸಚಿವ