Thursday, June 17, 2021

ಫೇಸ್’ಬುಕ್’ನಲ್ಲಿ ಉಗ್ರ ಸಿದ್ಧಾಂತದ ಫೋಸ್ಟ್: ತಮಿಳುನಾಡಿನ 4 ಕಡೆ ಎನ್ಐಎ ಶೋಧ

newsics.com

ಚೆನ್ನೈ: ಉಗ್ರ ಸಂಘಟನೆಗಳ ಸಿದ್ಧಾಂತ ಪ್ರತಪಾದಿಸುವ ಪೋಸ್ಟ್’ಗಳನ್ನು ಫೇಸ್’ಬುಕ್’ನಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭಾನುವಾರ ತಮಿಳುನಾಡಿನ ಮಧುರೈ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದೆ.

ಮಧುರೈ ಜಿಲ್ಲೆಯ ಕಾಜಿಮಾರ್ ಸ್ಟ್ರೀಟ್, ಕೆ. ಪುದರ್, ಪೆಥಾನಿಯಪುರಂ ಮತ್ತು ಮೆಹಬೂಬ್ ಪಾಳಯಂ ಎಂಬಲ್ಲಿ ಶೋಧ ನಡೆಸಲಾಗಿದೆ.

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಹಾಗೂ ಹಿಜ್ಬ್ ಉಲ್ ತಹ್ರಿರ್ ಮೂಲಭೂತವಾದಿ ಸಂಘಟನೆಯ ಸಿದ್ಧಾಂತವನ್ನು ಪ್ರತಿಪಾದಿಸುವ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿತ್ತು.

ಕಾರ್ಯಾಚರಣೆ ವೇಳೆ ಲ್ಯಾಪ್‌ಟ್ಯಾಪ್, ಹಾರ್ಡ್ ಡಿಸ್ಕ್‌ಗಳು, ಮೊಬೈಲ್ ಫೋನ್‌ಗಳು, ಮೆಮೊರಿ ಕಾರ್ಡ್‌ಗಳು, ಸಿಮ್, ಪೆನ್‌ ಡ್ರೈವ್‌ಗಳು ಆಕ್ಷೇಪಾರ್ಹ ಕರಪತ್ರ, ಪುಸ್ತಕಗಳು ಸೇರಿದಂತೆ 16 ಡಿಜಿಟಲ್ ಸಾಧನಗಳನ್ಬು ವಶಪಡಿಕೊಳ್ಳಲಾಗಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುರೈ ನಿವಾಸಿ, ಉಗ್ರಗಾಮಿ ಮೊಹಮ್ಮದ್ ಇಕ್ಬಾಲ್ ಎಂಬಾತನನ್ನು ಬಂಧಿಸಲಾಗಿತ್ತು. ಈತನಿಗೆ ಸಂಬಂಧಿಸಿದ ಕೆಲವು ದೋಷಾರೋಪಣೆಯ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಪ್ರಕರಣಕ್ಕೂ ಇದು ಸಂಬಂಧ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

‘ಥೂಂಗಾ ವಿಜಿಗಲ್ ರೆಂಡು ಈಸ್ ಇನ್ ಕಾಜಿಮಾರ್ ಸ್ಟ್ರೀಟ್‌’ ಹೆಸರಿನ ಫೇಸ್‌ಬುಕ್‌ ಪುಟದಲ್ಲಿ ನಿರ್ದಿಷ್ಟ ಸಮುದಾಯವನ್ನು ಕೆಣಕುವಂಥ ಪೋಸ್ಟ್‌ಗಳನ್ನು ಇಕ್ಬಾಲ್ ಅಪ್‌ಲೋಡ್ ಮಾಡಿದ್ದಾರೆ ಎಂದೂ ಅಧಿಕಾರಿಯು ಮಾಹಿತಿ ನೀಡಿದ್ದಾರೆ.

ಚೀನಾದಿಂದ ದೆಹಲಿಗೆ ಬಂತು 100 ಟನ್ ಆಕ್ಸಿಜನ್

ಡಿಆರ್’ಡಿಒದ ಆ್ಯಂಟಿ ಕೊರೋನಾ ಔಷಧ ನಾಳೆ ಬಿಡುಗಡೆ

ಮತ್ತಷ್ಟು ಸುದ್ದಿಗಳು

Latest News

ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ತಡೆ

newsics.com ಬೆಂಗಳೂರು: ರಾಜ್ಯ ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ 2020-21 ರ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 15 ದಿನಗಳೊಳಗೆ ಸಮಿತಿ ವರದಿ...

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೂರು ನೀಡಿದ ಯೋಗೇಶ್ವರ್

newsics.com ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಕೂಡ ರಾಜ್ಯ ಬಿಜೆಪಿ ನಾಯಕರ ಜತೆ ಸಮಾಲೋಚನೆ ಮುಂದುವರಿಸಿದ್ದಾರೆ. ಈ ಮಧ್ಯೆ  ಅರುಣ್...

ಜಗತ್ತಿನ ಮೂರನೇ ಅತಿ ದೊಡ್ಡ ವಜ್ರ ಪತ್ತೆ

newsics.com ಬೋಟ್ಸ್ವಾನ: ಜಗತ್ತಿನ‌ ಮೂರನೇ ಅತಿ ದೊಡ್ಡ ವಜ್ರ ಗ್ಯಾಬರೋನ್ ನಲ್ಲಿ ಪತ್ತೆಯಾಗಿದೆ. ಐದು ದಶಕಗಳಿಂದ ವಜ್ರದ ಗಣಿಗಾರಿಕೆ ಮತ್ತು ವ್ಯಾಪಾರದಲ್ಲಿ ತೊಡಗಿರುವ ಡಿ ಬೀರ್ಸ್ ಕಂಪನಿಯ ವಿಭಾಗವಾದ ಡೆಬ್ಸ್ವಾನಾ ಡೈಮಂಡ್ ಕಂಪನಿ ಪತ್ತೆಹಚ್ಚಿದ್ದು, 1,098...
- Advertisement -
error: Content is protected !!