newsics.com
ಚೆನ್ನೈ: ತಮಿಳುನಾಡು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ರಾಜ್ಯದ ಸಾಲದ ಪ್ರಮಾಣ 5, 70, 189 ಕೋಟಿ ರೂಪಾಯಿ ಆಗಿದೆ. ರಾಜ್ಯದ ಪ್ರತಿ ಕುಟುಂಬ 2, 63, 976 ರೂಪಾಯಿ ಸಾಲ ಹೊಂದಿದೆ ಎಂದು ಸರ್ಕಾರ ಇತ್ತೀಚೆಗೆ ಮಾಹಿತಿ ಬಿಡುಗಡೆಮಾಡಿತ್ತು.
ಇದನ್ನು ನೋಡಿದ ಮಹಾತ್ಮ ಗಾಂಧೀಜಿಯವರ ಅಭಿಮಾನಿಯೊಬ್ಬರು ಗಾಂಧೀ ವೇಷ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ 2, 63, 976 ರೂಪಾಯಿ ಚೆಕ್ ನೀಡಲು ಮುಂದಾಗಿದ್ದಾರೆ.
ಈ ಹಣ ಸ್ವೀಕರಿಸಿ ತಮ್ಮ ಕುಟಂಬವನ್ನು ಸಾಲದಿಂದ ಮುಕ್ತಗೊಳಿಸಿದ ದಾಖಲಾತಿ ನೀಡುವಂತೆ ಮಹಾತ್ಮ ಗಾಂಧೀಜಿ ಅವರ ಅನುಯಾಯಿ ಆಗಿರುವ ತಿಯಾಗ ರಾಜ ಅವರು ಮನವಿ ಮಾಡಿದ್ದಾರೆ.
ಆದರೆ ಈ ಹಣವನ್ನು ಸ್ವೀಕರಿಸಲು ನಾಮಕ್ಕಲ್ ಜಿಲ್ಲಾಧಿಕಾರಿ ನಿರಾಕರಿಸಿದ್ದಾರೆ.