newsics.com
ಅಗರ್ತಲಾ: ತ್ರಿಪುರಾದಲ್ಲಿ ಕಾಡಿನ ಮಧ್ಯೆ 25 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಿದ್ದ ಮೂರು ಲಕ್ಷ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ನಾಶಮಾಡಲಾಗಿದೆ. ತ್ರಿಪುರಾದ ಸೆಪಾಯಿಜಲಾ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಅತ್ಯಂತ ರಹಸ್ಯವಾಗಿ ಗಾಂಜಾ ಗಿಡಗಳನ್ನು ಕಾಡಿನ ಮಧ್ಯೆ ಬೆಳಸಲಾಗಿತ್ತು ಎಂದು ವರದಿಯಾಗಿದೆ.
ಗಡಿ ಭದ್ರತಾಪಡೆ ಯೋಧರು ಮತ್ತು ಸ್ಥಳೀಯ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಇಲ್ಲಿ ಬೆಳೆದ ಗಾಂಜಾವನ್ನು ದೇಶದ ಎಲ್ಲ ರಾಜ್ಯಗಳಿಗೆ ಪೂರೈಸಲಾಗುತ್ತಿತ್ತು ಎಂಬ ಸಂಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಗಾಂಜಾ ಬೆಳೆಗಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ