newsics.com
ನವದೆಹಲಿ: ದೆಹಲಿಯ ಮನೆಯೊಂದರಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಇಬ್ಬರು ಮಕ್ಕಳ ಸಹಿತ ಮೂವರು ಸಜೀವ ದಹನವಾಗಿದ್ದಾರೆ.
ನವದೆಹಲಿಯ ಆನಂದ್ ಪ್ರಭಾತ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ರಾತ್ರಿ ಹೊತ್ತು ಗ್ಯಾಸ್ ಸೋರಿಕೆಯಾದ ಬಗ್ಗೆ ಮನೆಯ ಸದಸ್ಯರಿಗೆ ತಿಳಿದಿರಲಿಲ್ಲ ಎಂದು ಹೇಳಲಾಗುತ್ತಿದೆ. ಬೆಳಿಗ್ಗೆ ಈ ದುರಂತ ನಡೆದಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ