Thursday, May 26, 2022

ಗೆರೆ ಕಿಸ್ ಪ್ರಕರಣ: ನಟಿ ಶಿಲ್ಪಾ ಶೆಟ್ಟಿ ಸಂತ್ರಸ್ತೆ ಎಂದ ಕೋರ್ಟ್

Follow Us

newsics.com

ಮುಂಬೈ(ಮಹಾರಾಷ್ಟ್ರ): ಸಾರ್ವಜನಿಕ ಸಮಾರಂಭವೊಂದರಲ್ಲಿ ಹಾಲಿವುಡ್ ತಾರೆ ರಿಚರ್ಡ್ ಗೆರೆ ಅವರು ಕೆನ್ನೆಗೆ ಮುತ್ತಿಟ್ಟ ಅಶ್ಲೀಲ ವರ್ತನೆ ಪ್ರಕರಣದಿಂದ ನಟಿ ಶಿಲ್ಪಾ ಶೆಟ್ಟಿಯವರನ್ನು ಕೋರ್ಟ್ ಬಿಡುಗಡೆ ಮಾಡಿದೆ.

ಸುಮಾರು 15 ವರ್ಷಗಳ ನಂತರ ಮುಂಬೈ ಕೋರ್ಟ್ ಈ ತೀರ್ಪು ನೀಡಿದ್ದು, ನಟಿ ಶಿಲ್ಪಾ ಶೆಟ್ಟಿಯವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಶಿಲ್ಪಾ ಶೆಟ್ಟಿ ಕೃತ್ಯದಲ್ಲಿ ಸಂತ್ರಸ್ತೆ ಎಂದು ತೋರುತ್ತದೆ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತ್ಕಿ ಚವ್ಹಾಣ್ ಅವರಿದ್ದ ನ್ಯಾಯಾಲಯ ಪೀಠ ಶಿಲ್ಪಾ ಶೆಟ್ಟಿಯವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿದೆ.

2007ರಲ್ಲಿ, ರಾಜಸ್ಥಾನದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮಕ್ಕಾಗಿ ಗೆರೆ ಅವರು ವೇದಿಕೆಯಲ್ಲೇ ಶಿಲ್ಪಾರನ್ನು ಅಪ್ಪಿ ಕೆನ್ನೆಗೆ ಮುತ್ತಿಟ್ಟಿದ್ದು ದೇಶದಲ್ಲಿ ಸಂಚಲನ ಮೂಡಿಸಿತ್ತು.

ದೂರುಗಳ ನಂತರ ಗೆರೆ ಮತ್ತು ಶಿಲ್ಪಾ ಶೆಟ್ಟಿ ಇಬ್ಬರ ವಿರುದ್ಧವೂ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಶ್ಲೀಲತೆಗಾಗಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಶಿಲ್ಪಾ ಶೆಟ್ಟಿ ಆರೋಪಿ ನಂ.1 ಆಗಿ ಮತ್ತು ರಿಚರ್ಡ್ ಗೆರೆ ಅವರ ವಿರುದ್ಧ ದೂರು ದಾಖಲಾಗಿತ್ತು.

ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ರಾಜಾತಿಥ್ಯ: ತನಿಖೆಗೆ ಆದೇಶಿಸಿದ ಸರ್ಕಾರ

ಹಿಮಪಾತದ ನಡುವೆ ಮದುವೆ ಮೆರವಣಿಗೆ: ವಿಡಿಯೋ ವೈರಲ್

ಮತ್ತಷ್ಟು ಸುದ್ದಿಗಳು

Latest News

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...

ಮಗನ ಪಬ್ ಜಿ ಆಟಕ್ಕೆ ತಾಯಿ ಬಲಿ

newsics.com ಚಿಕ್ಕಮಗಳೂರು: ಮಗನ ಪಬ್ ಜಿ ಆಟಕ್ಕೆ, ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಗಿರಿಶ್ರೇಣಿಯ ಅಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ. ಇಮ್ತಿಯಾಜ್ ಮತ್ತು ಮೈಮುನ್ನಾ ದಂಪತಿ ಕುಟುಂಬ ಎರಡು ವರ್ಷದಿಂದ ಎಸ್ಟೇಟ್ ನ ಕೂಲಿ ಲೈನ್...
- Advertisement -
error: Content is protected !!