newsics.com
ನವದೆಹಲಿ: ಹಾಕಿ ಇಂಡಿಯಾದ (ಎಚ್ಐ) ಅಧ್ಯಕ್ಷರಾಗಿ ಮಣಿಪುರದ ಜ್ಞಾನೇಂದ್ರೊ ನಿಂಗೊಂಬಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಂಗೊಂಬಮ್, ಈಶಾನ್ಯ ಪ್ರದೇಶದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ವ್ಯಕ್ತಿ. ಶುಕ್ರವಾರ ನಡೆದ ಹಾಕಿ ಇಂಡಿಯಾದ ಅಧಿವೇಶನ ಹಾಗೂ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ.
ಮೊಹಮ್ಮದ್ ಮುಷ್ತಾಕ್ ಅಹಮದ್ ಅವರನ್ನು ರಾಷ್ಟ್ರೀಯ ಕ್ರೀಡಾ ಸಂಹಿತೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪದವಿ ತೊರೆಯುವಂತೆ ಕ್ರೀಡಾ ಸಚಿವಾಲಯ ಸೂಚಿಸಿತ್ತು. ಮೊಹಮ್ಮದ್ ಮುಷ್ತಾಕ್ ಅವರು ಜುಲೈನಲ್ಲಿ ರಾಜೀನಾಮೆ ನೀಡಿದ್ದರು. ಆಗಿನಿಂದ ಜ್ಞಾನೇಂದ್ರೊ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮೊಹಮ್ಮದ್ ಮುಷ್ತಾಕ್ ಅವರು ಸದ್ಯ ಫೆಡರೇಷನ್ನಲ್ಲೇ ಉಳಿದುಕೊಂಡಿದ್ದು, ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾಕಿ ಇಂಡಿಯಾ ಅಧ್ಯಕ್ಷರಾಗಿ ಮಣಿಪುರದ ಜ್ಞಾನೇಂದ್ರೊ
Follow Us