Thursday, December 8, 2022

ಹೊಸ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಜಾದ್

Follow Us

newsics.com

ಶ್ರೀನಗರ: ಇತ್ತೀಚಿಗೆ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿರುವ ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರು ಇಂದು ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದು, ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ.

ಅಜಾದ್ ತಮ್ಮ ಹೊಸ ಪಕ್ಷಕ್ಕೆ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂದು ಹೆಸರಿಸಿಟ್ಟಿದ್ದಾರೆ. ಹಳದಿ, ಬಿಳಿ ಮತ್ತು ನೀಲಿ ಬಣ್ಣಗಳನ್ನು ಹೊಂದಿರುವ ಡೆಮಾಕ್ರಟಿಕ್ ಆಜಾದ್ ಪಕ್ಷದ ಧ್ವಜವನ್ನು ಸಹ ಅವರು ಅನಾವರಣಗೊಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹೊಸ ಪಕ್ಷಕ್ಕೆ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತದಲ್ಲಿ ಕಳುಹಿಸಲಾಗಿದೆ. ಹಿಂದಿ ಮತ್ತು ಉರ್ದು ಮಿಶ್ರಿತ ‘ಹಿಂದೂಸ್ತಾನಿ’ ಹೆಸರಾಗಿರಬೇಕು ಹಾಗೂ ಹೆಸರು ಪ್ರಜಾಪ್ರಭುತ್ವ, ಶಾಂತಿಯುತ ಮತ್ತು ಸ್ವತಂತ್ರವಾಗಿರಬೇಕು ಎಂದು ನಾವು ಬಯಸುತ್ತೇವೆ ಎಂದು ಗುಲಾಂ ನಬಿ ಆಜಾದ್ ಜಮ್ಮುವಿನಲ್ಲಿ ಹೇಳಿದ್ದಾರೆ.

ರಷ್ಯಾದ ಶಾಲೆಯಲ್ಲಿ ದುಷ್ಕರ್ಮಿಯಿಂದ ಗುಂಡಿನ ದಾಳಿ, ಏಳು ಮಕ್ಕಳ ಸಾವು

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!