newsics.com
ತಮಿಳುನಾಡು: ವ್ಯಾಕ್ಸಿನ್ ಹಾಕಿಸಿಕೊಂಡವರು ವಾಷಿಂಗ್ ಮಷೀನ್, ಗ್ರೈಂಡರ್, ಮಿಕ್ಸರ್, ಪ್ರೆಷರ್ ಕುಕ್ಕರ್ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಗೆಲ್ಲಬಹುದಾದ ಯೋಜನೆಯನ್ನು ಕರೂರ್ ಜಿಲ್ಲಾಡಳಿತ ಘೋಷಿಸಿದೆ.
ತಮಿಳುನಾಡಿನ ಕರೂರ್ ನ ಜಿಲ್ಲಾಧಿಕಾರಿ ಟಿ ಪ್ರಭುಶಂಕರ್ ಈ ಯೋಜನೆ ಘೋಷಿಸಿದ್ದು, ಮುಂದಿನ ಭಾನುವಾರ ನಡೆಯಲಿರುವ ಬೃಹತ್ ಲಸಿಕಾ ಮೇಳದಲ್ಲಿ ಅತಿ ಹೆಚ್ಚು ಮಂದಿ ಲಸಿಕೆ ಪಡೆಯಲು ಉತ್ತೇಜಿಸಲು ಈ ಘೋಷಣೆ ಮಾಡಲಾಗಿದೆ. ಓರ್ವ ವ್ಯಕ್ತಿ ಎಷ್ಟು ಮಂದಿಯನ್ನು ಲಸಿಕೆ ಹಾಕಿಸಲು ಕರೆತರುತ್ತಾರೆ ಎಂಬುದರ ಆಧಾರದ ಮೇಲೆ 5 ರೂಪಾಯಿ ಪ್ರೋತ್ಸಾಹ ಧನ ಕೂಡಾ ನೀಡಲಾಗುತ್ತದೆ.
ಲಸಿಕೆ ಹಾಕಿಸಿಕೊಳ್ಳುವವರನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಮೊದಲ ಬಹುಮಾನಕ್ಕೆ ವಾಷಿಂಗ್ ಮಷೀನ್ ಇದ್ದರೆ, ದ್ವಿತೀಯ ಬಹುಮಾನಕ್ಕೆ ಗ್ರೈಂಡರ್, ತೃತೀಯ ಬಹುಮಾನಕ್ಕೆ ಮಿಕ್ಸರ್ ಗ್ರೈಂಡರ್ ಹಾಗೂ ನಾಲ್ಕನೇ ಸ್ಥಾನ ಗಳಿಸಿದ 25 ಮಂದಿಗೆ ಕುಕ್ಕರ್ ನೀಡಲಾಗುತ್ತದೆ. 100 ಮಂದಿಗೆ ಇನ್ನಿತರ ಗೃಹೋಪಯೋಗಿ ವಸ್ತುಗಳನ್ನು ಸಮಾಧಾನಕರ ಬಹುಮಾನವನ್ನಾಗಿ ಘೋಷಣೆ ಮಾಡಲಾಗುತ್ತದೆ.