newsics.com
ಲಕ್ನೊ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರಚರ್ ಮೇಲೆ ಇರಿಸಲಾದ ಬಾಲಕಿಯ ಮೃತದೇಹವನ್ನು ನಾಯಿಯೊಂದು ಎಳೆದು ತಿನ್ನುತ್ತಿರುವ ಹೃದಯವಿದ್ರಾವಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಸಂಭಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಪಘಾತವೊಂದರಲ್ಲಿ ಮೃತಪಟ್ಟ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಹಿನ್ನೆಲೆಯಲ್ಲಿ ಸಂಭಲ್ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಆಸ್ಪತ್ರೆಯ ಮೆಟ್ಟಿಲ ಸಮೀಪವಿರುವ ಮೃತದೇಹವನ್ನು ನಾಯಿಯೊಂದು ಎಳೆಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಅಮಿತಾಭ್ ಸಿಂಗ್ ಹೇಳಿದ್ದಾರೆ. ನನ್ನ ಪುತ್ರಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತರಲಾಗಿತ್ತು. ಪುತ್ರಿಯ ಮೃತದೇಹವನ್ನು ನಾಯಿ ತಿನ್ನುತ್ತಿರುವುದು ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಬಹಿರಂಗಗೊಳಿಸಿದೆ ಎಂದು ಬಾಲಕಿಯ ತಂದೆ ದೂರಿದ್ದಾರೆ.
The dead body of a girl, who died in a road accident, was allegedly fed upon by a stray dog outside the emergency ward of a govt hospital in UP's Sambhal. The hospital staff said that it was the fault of the attendant.
— Kanwardeep singh (@KanwardeepsTOI) November 26, 2020
Disturbing video of the incident@Benarasiyaa pic.twitter.com/veJSMH5Dol
ಕೊರೋನಾ ವಿರುದ್ಧ ಮರವೇರಿದ್ದ ಸ್ವಾಮೀಜಿ ತಪಸ್ಸು ಇಂದು ಅಂತ್ಯ
ಬ್ಲೂ ಫಿಲಂ ನೋಡಿ ಗೆಳೆಯನ ತಾಯಿಯ ರೇಪ್ ಮಾಡಿದ ಕೀಚಕ
ಗೆಳೆಯನ ಪತ್ನಿ ಜತೆ ಅಕ್ರಮ ಸಂಬಂಧ : ಕಲ್ಲು ಎತ್ತಿ ಹಾಕಿ ಪತಿಯ ಕೊಲೆ
ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕ ಪೀಟರ್ ಬಂಧನ
ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರಡೋನಾ ಹೆಸರು
ಈ ದೇಶದಲ್ಲಿ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್