newsics.com
ನವದೆಹಲಿ: ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಸಿಂಗಾಪುರ ಮೊದಲ ಸ್ಥಾನ ಪಡೆದಿದೆ.
ಭಾರತದ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಭಾರೀ ಹಿನ್ನಡೆ ಸಾಧಿಸಿವೆ.
ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್(ಐಎಮ್‌ಡಿ), ಸಿಂಗಾಪುರ್ ಯೂನಿವರ್ಸಿಟಿ ಫಾರ್ ಟೆಕ್ನಾಲಜಿ ಅಂಡ್ ಡಿಸೈನ್ (ಎಸ್‌ಯುಟಿಡಿ) ಸಹಯೋಗದೊಂದಿಗೆ 2020ರ ಸ್ಮಾರ್ಟ್ ಸಿಟಿ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ.
2020ರ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಹೈದರಾಬಾದ್ 85ನೇ ಸ್ಥಾನದಲ್ಲಿದೆ (2019ರಲ್ಲಿ 67ನೇ ಸ್ಥಾನದಲ್ಲಿತ್ತು), ನವದೆಹಲಿ 86 ನೇ ಸ್ಥಾನದಲ್ಲಿದೆ (2019ರಲ್ಲಿ 68ನೇ ಸ್ಥಾನ ಪಡೆದಿತ್ತು), ಮುಂಬೈ 93ನೇ ಸ್ಥಾನದಲ್ಲಿದೆ (2019ರಲ್ಲಿ 78ನೇ ಸ್ಥಾನದಲ್ಲಿತ್ತು) ಮತ್ತು ಬೆಂಗಳೂರು 95ನೇ ಸ್ಥಾನದಲ್ಲಿದೆ(2019 ರಲ್ಲಿ 79ನೇ ಸ್ಥಾನ ಪಡೆದಿತ್ತು).
ಭಾರತೀಯ ನಗರಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದು, ಅವುಗಳು ಕೊರೋನಾ ವಿರುದ್ಧ ಹೋರಾಡಲು ಸಿದ್ಧವಾಗಿಲ್ಲ ಎಂದು ವರದಿಯಲ್ಲಿ ಹೇಳಿದೆ.
2020 ಸ್ಮಾರ್ಟ್ ಸಿಟಿ ಇಂಡೆಕ್ಸ್ (ಎಸ್‌ಸಿಐ) ಸಿಂಗಾಪುರದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಹೆಲ್ಸಿಂಕಿ ಮತ್ತು ಜುರಿಚ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ. ಟಾಪ್ 10 ಪಟ್ಟಿಯಲ್ಲಿ ಆಕ್ಲೆಂಡ್(4ನೇ), ಓಸ್ಲೋ(5ನೇ ಸ್ಥಾನ), ಕೋಪನ್ ಹ್ಯಾಗನ್(6ನೇ ಸ್ಥಾನ), ಜಿನೀವಾ (7ನೇ ಸ್ಥಾನ), ತೈಪೆ ನಗರ (8ನೇ ಸ್ಥಾನ), ಆಮ್ಸ್ಟರ್‌ಡ್ಯಾಮ್ (9ನೇ ಸ್ಥಾನ) ಮತ್ತು ನ್ಯೂಯಾರ್ಕ್ 10ನೇ ಸ್ಥಾನದಲ್ಲಿದೆ.
ಹಿಂದು ಮಹಾಸಾಗರದಲ್ಲಿ ಪತ್ತೆಯಾಗಿದ್ದ ಚೀನಾ ನೌಕೆ; ಎಚ್ಚರಿಕೆ ಬಳಿಕ ವಾಪಸ್