newsics.com
ಮುಂಬೈ: ಕಳೆದ ಕೆಲವು ದಿನಗಳಿಂದ ದಿನೇ ದಿನ ಕುಸಿಯುತ್ತಿರುವ ಚಿನ್ನದ ಬೆಲೆ ಶುಕ್ರವಾರ ಮತ್ತಷ್ಟು ಇಳಿಕೆಯಾಗಿದೆ.
ಡಾಲರ್ ಮೌಲ್ಯ ಹೆಚ್ಚಿದ ಕಾರಣ ಅಂತಾರಾಷ್ಟ್ರೀಯ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದೆ. ಎಂಸಿಎಕ್ಸ್ನಲ್ಲಿ ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 408 ರೂಪಾಯಿಗಳಷ್ಟು ಕಡಿಮೆಯಾಗಿ 49,496 ರೂ.ಗೆ ತಲುಪಿದೆ.
ಬೆಳ್ಳಿಯ ಬೆಲೆ 1,506 ರೂ.ಗಳಷ್ಟು ಕಡಿಮೆಯಾಗಿ ಕೆ.ಜಿ.ಗೆ 58,123 ರೂ.ಗಳಿಗೆ ತಲುಪಿದೆ. ಕಳೆದ ಐದು ದಿನಗಳಲ್ಲಿ ಚಿನ್ನದ ಬೆಲೆ ನಾಲ್ಕನೇ ಬಾರಿಗೆ ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಔನ್ಸ್ ಚಿನ್ನದ ಬೆಲೆ 0.2 ಶೇಕಡಾ ಪತನಗೊಂಡು 1864 ಡಾಲರ್ಗೆ ತಲುಪಿದೆ.
ಐದು ದಿನಗಳಲ್ಲಿ 4 ಬಾರಿ ಚಿನ್ನದ ಬೆಲೆ ಕುಸಿತ
Follow Us