ನವದೆಹಲಿ: ವಿಮಾನದಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ವಿಮಾನ ಟಿಕೆಟ್ ಕ್ಯಾನ್ಸಲ್ ಆದರೆ ಶೇ.75ರಷ್ಟು ಹಣ ವಾಪಸ್ ಸಿಗಲಿದೆ.
ವಿಮಾನದಲ್ಲಿ ಪ್ರಯಾಣಿಕರಿಗೆ ದೇಶೀಯ ಹಾಗೂ ಅಂತರಾಷ್ಟ್ರೀಯ ಪ್ರಯಾಣದಲ್ಲಿ ಅನುಕೂಲ ಕಲ್ಪಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲ (ಡಿಜಿಸಿಎ)ಮುಂದಾಗಿದ್ದು, ಬುಧವಾರ ನಾಗರಿಕ ವಿಮಾನಯಾನ ಅಗತ್ಯತೆ(ಸಿಎಆರ್) ನಿಯಮಗಳಿಗೆ ತಿದ್ದುಪಡಿ ತಂದಿದೆ.
ತಿದ್ದುಪಡಿ ಪುಕಾರ, CAR ನಲ್ಲಿ, ವಿಳಂಬ, ರದ್ಧತಿ ಮತ್ತು ಫೈಯಿಂಗ್ ಕ್ಲಾಸ್ ಅನೈಚ್ಛಿಕವಾಗಿ ಡೌನ್ಗ್ರೇಡ್ ಮಾಡುವಿಕೆಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಮರುಪಾವತಿ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗುತ್ತದೆ.
ವಿಮಾನ ಹತ್ತಲು ನಿರಾಕರಿಸಿದರೆ, ವಿಮಾನಗಳ ಹಾರಾಟ ರದ್ದಾದರೆ ಹಾಗೂ ವಿಮಾನಗಳ ಹಾರಾಟ ವಿಳಂಬವಾದರೆ ತೆರಿಗೆ ಸೇರಿ ಒಟ್ಟು ಟಿಕೆಟ್ ದರದ ಶೇ.15ರಷ್ಟು ಹಣವನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡುವುದು ಹೊಸ ನಿಯಮದಲ್ಲಿದೆ. ಇದರಿಂದಾಗಿ, ಪ್ರಯಾಣಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ.
ಪದ್ಮ ಪ್ರಶಸ್ತಿ ಪ್ರಕಟ ಮಾಡಿದ ಕೇಂದ್ರ ಸರ್ಕಾರ-ಕರ್ನಾಟಕದ ಇಬ್ಬರಿಗೆ ಗೌರವ