newsics.com
ನವದೆಹಲಿ: ಕೊರೋನಾ ಕಾರಣದಿಂದ ಗೂಗಲ್ ಉದ್ಯೋಗಿಗಳಿಗೆ ಈಗ ಸಂಬಳ ಕಡಿತದ ಆತಂಕ ಎದುರಾಗಿದೆ. ಉದ್ಯೋಗಿಗಳು ಶಾಶ್ವತವಾಗಿ ವರ್ಕ್ ಪ್ರಾಮ್ ಹೋಮ್ ಬಯಸಿದರೆ ವೇತನ ಕಡಿತವನ್ನು ಎದುರಿಸಬೇಕಾಗುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸದ್ಯ ಈ ವಿಚಾರ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಈಗಾಗಲೇ ಟ್ವಿಟರ್ ಮತ್ತು ಫೇಸ್ಬುಕ್ ಕಡಿಮೆ ವೆಚ್ಚದ ದೂರದಲ್ಲಿ ಇರುವ ಉದ್ಯೋಗಿಗಳಿಗೆ ವೇತನ ಕಡಿತಗೊಳಿಸಿದೆ.
ಆಲ್ಫಾಬೆಟ್ ಇಂಕ್ ಗೂಗಲ್ ಉದ್ಯೋಗಿಗಳು ತಂಗಿರುವ ಸ್ಥಳವನ್ನು ಆಧರಿಸಿ ಸಂಬಳವನ್ನು ನೀಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಉದ್ಯೋಗಿಗಳಿಗೆ ಪಾವತಿಸುವ ಪ್ಯಾಕೇಜ್‌ಗಳನ್ನು ಯಾವಾಗಲೂ ಸ್ಥಳದಿಂದ ನಿರ್ಧರಿಸಲಾಗುತ್ತದೆ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ. ವೇತನವು ನಗರದಿಂದ ನಗರಕ್ಕೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಜೂನ್ ನಲ್ಲಿ ವರ್ಕ್ ಪ್ಲೇಸ್ ಟೂಲ್ ಅನ್ನು ಆರಂಭಿಸಿದ ಕಂಪನಿಯು, ಮನೆಯಿಂದ ಕೆಲಸ ಮಾಡುವವರ ವೇತನದಲ್ಲಿ ಸುಮಾರು ಶೇ 10 – 20 ರಷ್ಟು ಕಡಿತ ಮಾಡಲಿದೆ ಎಂದು ಅಂದಾಜಿಸಲಾಗಿದೆ.