newsics.com
ನವದೆಹಲಿ: ಬುಧವಾರ ತನ್ನೆಲ್ಲಾ ಉದ್ಯೋಗಿಗಳಿಗೆ ಆಂತರಿಕ ಈ ಮೇಲ್ ಕಳಿಸಿರುವ ಗೂಗಲ್, ಎಲ್ಲಾ ಉದ್ಯೋಗಿಗಳು ಶೀಘ್ರದಲ್ಲಿಯೇ ಮರಳಿ ಆಫೀಸ್‌ಗೆ ಬಂದು ನಿಗದಿತವಾಗಿ ಕೆಲಸ ಮಾಡುವ ದಿನಚರಿಯನ್ನು ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದೆ.
ಆಂತರಿಕವಾಗಿ ಕಳಿಸಿರುವ ಈ ಮೇಲ್‌ನಲ್ಲಿ ಉದ್ಯೋಗಿಗಳನ್ನು ವಾರಕ್ಕೆ ಮೂರು ದಿನ ಕಚೇರಿಗೆ ಬರುವುದು ಕಡ್ಡಾಯ ಮಾಡುವುದು ಮಾತ್ರವಲ್ಲ, ಪ್ರತಿ ವರ್ಷದ ಉದ್ಯೋಗಿಯ ನಿರ್ವಹಣೆಯ ಪರಿಶೀಲನೆಯ ಸಮಯದಲ್ಲಿ ಅವರ ಕಚೇರಿ ಹಾಜರಾತಿಯನ್ನೂ ಪ್ರಮುಖ ಅಂಶವನ್ನಾಗಿ ಪರಿಗಣಿಸುವುದಾಗಿ ತಿಳಿಸಿದೆ. ಹಾಗಾಗಿ ವಾರದಲ್ಲಿ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಗೂಗಲ್ ತಿಳಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಸುದ್ದಿ ಪ್ರಕಟ ಮಾಡಿದೆ.
ನಮ್ಮ ಉದ್ಯೋಗಿಗಳು ಈಗಾಗಲೇ ಒಂದು ವರ್ಷದಿಂದ ಹೈಬ್ರಿಡ್ ಮಾಡೆಲ್‌ಅಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರದಲ್ಲಿ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಉಳಿದ ಎರಡು ದಿನವನ್ನು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ ಎಂದು ಗೂಗಲ್ ವಕ್ತಾರ ರಾನ್ ಲಾಮೋಂಟ್ ತಿಳಿಸಿದ್ದಾರೆ. ಇದು ಉತ್ತಮವಾಗಿ ಸಾಗುತ್ತಿದೆ. ನಮ್ಮ ಉದ್ದೇಶ ಏನೆಂದರೆ ಗೂಗಲರ್‌ಗಳು ಎಲ್ಲರ ಜೊತೆಯನ್ನೂ ಬೆರೆಯಬೇಕು. ಹಾಗಾಗಿ ತೀರಾ ಅಪರೂಪದ ಪ್ರಸಂಗದಲ್ಲಿ ಮಾತ್ರವೇ ವರ್ಕ್ ಫ್ರಂ ಹೋಮ್ ನೀಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
102 ಮಕ್ಕಳಾದ ನಂತರ12 ಹೆಂಡತಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ನಿರ್ಧರಿಸಿದ ವ್ಯಕ್ತಿ