ಭುವನೇಶ್ವರ: ಕಟಕ ಜಿಲ್ಲೆಯ ಬೈದೇಶ್ವರ ಮಹಾನದಿಯಲ್ಲಿ ದೇವಾಲಯವೊಂದು ಪತ್ತೆಯಾಗಿದೆ. ಮಹಾನದಿ ಕಣಿವೆಯಲ್ಲಿರುವ ಪಾರಂಪರಿಕ ತಾಣಗಳ ಸಂಗ್ರಹ ಯೋಜನೆಯ ವೇಳೆ ಈ ಪುರಾತನ ದೇವಾಲಯ ಪತ್ತೆಯಾಗಿದೆ.
ಅಂದಾಜು 500 ವರ್ಷದಷ್ಟು ಹಳೆಯದು ಎಂದು ಊಹಿಸಲಾದ ಗೋಪಿನಾಥ ದೇವಾಲಯ ಮಸ್ತಕ ಶೈಲಿಯಲ್ಲಿದ್ದು ಅಂದಾಜು 15-16ನೇ ಶತಮಾನದಲ್ಲಿ ನಿರ್ಮಿಸಿದ್ದು ಎಂದು ಅಂದಾಜಿಸಲಾಗುತ್ತಿದೆ.
ಮಂದಿರಪತ್ತೆ ಹಚ್ಚಿದ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆ ದೇವಾಲಯವನ್ನು ಬೇರೆಡೆ ಸ್ಥಳಾಂತರ ಮಾಡುವ ಕುರಿತು ಒಡಿಶಾ ಸರ್ಕಾರಕ್ಕೆ ಪತ್ರ ಬರೆಯಲಿದೆ.
ಈ ಗೋಪಿನಾಥ ಮಂದಿರ ಆಗ ಶತಪತನ ಎಂದು ಖ್ಯಾತವಾಗಿತ್ತು. ಆದರೆ ಮಹಾನದಿ ಪಥ ಬದಲಾಗಿ ಇಡೀ ಗ್ರಾಮವೇ ಮುಳುಗಿಹೋಗಿತ್ತು. ಈ ದೇವಾಲಯ ಪತ್ತೆ ಹಚ್ಚಲು ರಬೀಂದ್ರ ರಾಣಾ ನೆರವಾಗಿದ್ದು ಅವರು ಹೇಳುವ ಪ್ರಕಾರ 19ನೇ ಶತಮಾನದಲ್ಲಿ ಈ ಮಂದಿರ ಮುಳುಗಡೆಯಾಗುವ ಭೀತಿ ಇದ್ದರಿಂದ ಆಗಲೇ ಇದ್ದರಲ್ಲಿದ್ದ ಪ್ರಮುಖ ದೇವರುಗಳ ಮೂರ್ತಿಗಳನ್ನ ತೆಗೆದು ಈಗಿನ ಪದ್ಮಾವತಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ ಗೋಪಿನಾಥ ದೇವಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತಂತೆ.