newsics.com
ಉತ್ತರಾಖಂಡ್: ಉತ್ತರಾಖಂಡ್ ಹಿಮನದಿ ಸ್ಫೋಟ ದುರಂತದಲ್ಲಿ ನಾಪತ್ತೆಯಾದ 135 ಜನರನ್ನು ಮೃತರು ಎಂದು ಘೋಷಿಸುವುದಾಗಿ ಉತ್ತರಾಖಂಡ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ. ಫೆ.7ರಂದು ನಡೆದ ದುರಂತದಲ್ಲಿ
ಈವರೆಗೆ ಕಾರ್ಯಾಚರಣೆಯಲ್ಲಿ ಕಣ್ಮರೆಯಾಗಿದ್ದ 204 ಜನರಲ್ಲಿ 69 ಮೃತದೇಹ ಪತ್ತೆಯಾಗಿದ್ದು, ಇನ್ನು 135 ಜನರ ಬಗ್ಗೆ ಸುಳಿವಿಲ್ಲದ ಕಾರಣ ಅವರನ್ನು ಮೃತರು ಎಂದು ಘೋಷಿಸಲು ನಿರ್ಧರಿಸಿದೆ.
ನಿಯೋಜಿತ ಸರ್ಕಾರಿ ನಾಪತ್ತೆಯಾದ ಅಧಿಕಾರಿಯ ಮರಣ ಪ್ರಮಾಣಪತ್ರವನ್ನು ಅವರ ಕುಟುಂಬ ಅಥವಾ ಸಂಬಂಧಿಕರಿಗೆ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಅಮಿತ್ ನೆಗಿ ತಿಳಿಸಿದ್ದಾರೆ.
ಇನ್ನು ಕಾಣೆಯಾದ ವ್ಯಕ್ತಿಯು ಬದುಕುಳಿಯುವ ಸಾಧ್ಯತೆಯನ್ನು ಮೀರಿ ಮೃತಪಟ್ಟಿದ್ದರೆ , ಆತನ ಶವ ಪತ್ತೆಯಾಗದಿದ್ದರೆ , ಆತನ ಕುಟುಂಬಕ್ಕೆ ಮರಣ ಪ್ರಮಾಣಪತ್ರ ನೀಡಿ ಮರಣಹೊಂದಿದ್ದಾನೆಂದು ಘೋಷಿಸಬಹುದು ಎಂದಿದ್ದಾರೆ ಎಂದು ವರದಿಗಳು ಹೇಳಿವೆ.