Tuesday, December 5, 2023

ಜಿಪಿಎಸ್ ಮ್ಯಾಪ್ ಎಡವಟ್ಟು: ಕಾರು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರ ಸಾವು

Follow Us

newsics.com

ತಿರುವನಂತಪುರಂ: ಜಿಪಿಎಸ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋದ ಕಾರೊಂದು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರು ಮೃತಪಟ್ಟ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.

ತಡರಾತ್ರಿ ಭಾರಿ ಮಳೆಯ ಕಾರಣ ಅವಘಡ ಸಂಭವಿಸಿದೆ. ಮೃತರನ್ನು ಡಾ.ಅದ್ವೈತ್ (29) ಹಾಗೂ ಡಾ.ಅಜ್ಮಲ್ ಆಸಿಫ್ (29) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇತರ ಮೂವರು ಹೊರಬಂದು ತಮ್ಮ ಜೀವ ಉಳಿಸಿಕೊಂಡಿದ್ದಾರೆ.

ಡಾ.ಅದ್ವೈತ್ ಹುಟ್ಟುಹಬ್ಬದ ಸಲುವಾಗಿ ಗೆಳೆಯರೊಂದಿಗೆ ಶಾಪಿಂಗ್‍ಗೆ ಕೊಚ್ಚಿಗೆ ಹೋಗಿದ್ದರು. ಶಾಪಿಂಗ್ ಮುಗಿಸಿ ಕೊಚ್ಚಿಯಿಂದ ಕೊಡುಂಗಲ್ಲೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಭಾರೀ ಮಳೆಯಾಗುತ್ತಿತ್ತು. ದಾರಿಯ ಪರಿಚಯ ಇರದ ಕಾರಣ ಜಿಪಿಎಸ್ ನೆರವು ಪಡೆದುಕೊಂಡಿದ್ದಾರೆ. ಈ ವೇಳೆ ನೀರು ತುಂಬಿದ ರಸ್ತೆಯಲ್ಲಿ ಕಾರು ಸಂಚರಿಸಿದೆ. ಜಿಪಿಎಸ್ ಮ್ಯಾಪ್‍ನಲ್ಲಿ ದಾರಿ ನೇರವಾಗಿ ತೋರಿಸಿದೆ. ಅದೇ ಮಾರ್ಗದಲ್ಲಿ ಸಂಚರಿಸಿದ ಕಾರು ನದಿಯಲ್ಲಿ ಮುಳುಗಿದೆ.

ವರದಿಗಾರ್ತಿ ಮೇಲೆ ರೇಗಿದ ಅಣ್ಣಾಮಲೈ: ಖಂಡನೆ

ಮತ್ತಷ್ಟು ಸುದ್ದಿಗಳು

vertical

Latest News

ವಿಜಯೇಂದ್ರ ಪತ್ನಿ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿ

Newsics.com ಕಲಬುರಗಿ : ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ನಿ ಸಹೋದರ ಡಾ ಪ್ರಭುಲಿಂಗ ಮಾನ್ಕರ್ ಅವರ ಮನೆ...

ಭಾರತದಲ್ಲಿ 75 ಲಕ್ಷಕ್ಕೂ ಅಧಿಕ ವಾಟ್ಸ್ ​ಆ್ಯಪ್ ಅಕೌಂಟ್ ಬ್ಯಾನ್

Newsics.com ನವದೆಹಲಿ : ಮೆಟಾದ ತ್ವರಿತ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸ್​ಆ್ಯಪ್ ಭಾರತದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 75 ಲಕ್ಷಕ್ಕೂ ಅಧಿಕ ವಾಟ್ಸ್​ ಆ್ಯಪ್ ಖಾತೆಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ. 2021 ಬಳಕೆದಾರರ ಸುರಕ್ಷತ...

ತೆಲಂಗಾಣದ ನೂತನ ಸಿಎಂ ಇವರೇ : ನಾಳೆಯೇ ಪ್ರಮಾಣ ವಚನ..!!

Newsics.com ಹೈದರಾಬಾದ್ : ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಇದೀಗ ಬಂದ ಮಾಹಿತಿ ಪ್ರಕಾರ, ರೇವಂತ್ ರೆಡ್ಡಿ ಅವರನ್ನೇ...
- Advertisement -
error: Content is protected !!