newsics.com
ಉತ್ತರಪ್ರದೇಶ; ಮದುವೆ ಮೆರವಣಿಗೆ ವೇಳೆ ವರ ಖುಷಿಗೆ ಗುಂಡು ಹಾರಿಸಿದ್ದು, ಆ ಗುಂಡು ಆತನ ಸ್ನೇಹಿತನಿಗೆ ತಗುಲಿ ಸಾವನ್ನಪ್ಪಿದ್ದಾರೆ. ವರನನ್ನು ಮನೀಶ್ ಮಧೇಶಿಯಾ ಎಂದು ಹಾಗೂ ಮೃತ ಸ್ನೇಹಿತನನ್ನು ಬಾಬು ಲಾಲ್ ಯಾದವ್ ಎಂದು ಗುರುತಿಸಲಾಗಿದೆ.
ಇದರಿಂದ ಮದುವೆಯಾಗಬೇಕಾದ ವರ ಜೈಲು ಪಾಲಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರ ಮತ್ತು ಮೃತ ಸ್ನೇಹಿತ ಯೋಧರು ಎಂದು ತಿಳಿದುಬಂದಿದೆ.