Wednesday, November 30, 2022

ಭೀಕರ ಅಪಘಾತ- 10 ಮಂದಿ ಸಾವು, 7 ಮಂದಿಗೆ ಗಾಯ

Follow Us

newsics.com

ವಡೋದರ: ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಗುಜರಾತ್‌ನ ವಡೋದರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ತ್ರಿಚಕ್ರ ವಾಹನವೊಂದಕ್ಕೆ ಕಂಟೈನರ್‌ ಟ್ರಕ್‌ ಡಿಕ್ಕಿ ಹೊಡೆದಿದೆ. ದುರಂತದಲ್ಲಿ ಗಾಯಗೊಂಡಿರುವ ಏಳು ಮಂದಿಯನ್ನು ವಡೋದರ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.  ಮೃತ 10 ಮಂದಿ ಈ ಪೈಕಿ ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ.

ಕಂಟೈನರ್‌ ಟ್ರಕ್‌ ಮೇಲೆ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಮೊದಲು ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆ ವಿಭಜಕವನ್ನು ಹಾರಿದ ಕಂಟೈನರ್‌ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ತ್ರಿಚಕ್ರ ವಾಹನಕ್ಕೆ ಗುದ್ದಿದೆ. ಪರಿಣಾಮ ತ್ರಿಚಕ್ರ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ.

ದುರ್ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ವಿಷಾಧ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿಯ ಕುಟುಂಬಕ್ಕೆ ತಲಾ ₹ 4 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹ 50,000 ಪರಿಹಾರ ಘೋಷಿಸಿದ್ದಾರೆ.

ಸತ್ಯನಾರಾಯಣ ಪೂಜೆ ಮಾಡಿದ್ರೂ ಸಿಗಲಿಲ್ಲ ಹೆಣ್ಣು: ಅರ್ಚಕನ ಕಿವಿ ಕಚ್ಚಿದ ಅಪ್ಪ, ಮಗ

ಮತ್ತಷ್ಟು ಸುದ್ದಿಗಳು

vertical

Latest News

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್...

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು ಸದ್ಯದಲ್ಲೇ ಶೇರ್ ಮಾಡುತ್ತಾರೆ ಎಂದು ಅವರ...

ಹೃದಯಾಘಾತವಾಗಿ ದೇವಾಲಯದ ಆನೆ ಸಾವು

newsics.com ಪುದುಚೇರಿ: ಇತಿಹಾಸ ಪ್ರಸಿದ್ಧ ದೇಗುಲದ ಆನೆಯೊಂದು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ. ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕರ ದೇಗುಲಕ್ಕೆ ಸೇರಿದ್ದ ಆನೆ ಲಕ್ಷ್ಮಿ ವಿಹರಿಸುತ್ತಿದ್ದಾಗ ಹಠಾತ್ ಕುಸಿದಿದೆ. ಈ ವೇಳೆ ಆನೆಗೆ...
- Advertisement -
error: Content is protected !!