ಲಕ್ನೋ: ಲಕ್ನೋದಲ್ಲಿ ನಡೆಯುತ್ತಿರುವ 11 ನೇ ದ್ವೈವಾರ್ಷಿಕ ರಕ್ಷಣಾ ಪ್ರದರ್ಶನ ಮೇಳ-ಡೆಫ್ ಎಕ್ಸ್ ಪೊದಲ್ಲಿ ಹಿಂದೂಸ್ಥಾನ ವಿಮಾನ ಕಾರ್ಖಾನೆ(ಎಚ್ಎಎಲ್)ಹಗುರ ಬಹುಬಳಕೆ ಹೆಲಿಕಾಪ್ಟರ್ (ಎಲ್‌ಯುಹೆಚ್) ನಿರ್ಮಾಣದ ಆರಂಭಿಕ ಕಾರ್ಯಾಚರಣಾ ಒಪ್ಪಿಗೆ (ಐಒಸಿ) ಪತ್ರ ಪಡೆದುಕೊಂಡಿದೆ.
ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ನಡೆದ ‘ಬಂಧನ್’ ಕಾರ್ಯಕ್ರಮದಲ್ಲಿ ಎಚ್‌ಎಎಲ್ ಸಿಎಂಡಿ ಆರ್ ಮಾಧವನ್ ಅವರು, ಡಿಆರ್‌ಡಿಒ ಅಧ್ಯಕ್ಷ ಜಿ ಸತೀಶ್ ರೆಡ್ಡಿ ಅವರಿಂದ ಐಒಸಿ ಪತ್ರ ಪಡೆದರು. ಇದರಿಂದ ಭಾರತ ವಾಯುಪಡೆ ಮತ್ತು ಭಾರತೀಯ ಸೇನೆಗೆ ಅಗತ್ಯವಿರುವ ಎಲ್‌ಯುಎಚ್ ಉತ್ಪಾದನೆಗೆ ಹಸಿರು ನಿಶಾನೆ ದೊರೆತಂತಾಗಿದೆ.
ಎಚ್ಎಎಲ್ ಗೆ ಹಗುರ ಹೆಲಿಕಾಪ್ಟರ್ ನಿರ್ಮಾಣದ ಕಾರ್ಯಾಚರಣೆ ಒಪ್ಪಿಗೆ ಪತ್ರ
Follow Us