ನವದೆಹಲಿ: ಇದೇ ಗುರುವಾರದಿಂದ (ಜ.15) ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಪಾಸ್ವಾನ್, 2018ರ ಜೂನ್ 14ರಂದು ಸರ್ಕಾರ ಬಂಗಾರ ಮತ್ತು ಬೆಳ್ಳಿಯ ಜ್ಯುವೆಲ್ಲರಿಗಳ ಮೇಲೆ ಹಾಲ್ ಮಾರ್ಕ್ ಅಗತ್ಯ ಎಂದು ತಿಳಿಸಿತ್ತು. ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟವನ್ನು ದೃಢೀಕರಿಸಲು ಹಾಲ್ ಮಾರ್ಕ್ ಅಗತ್ಯ ಎಂದರು.
ಆಭರಣದಲ್ಲಿ ಬಳಸಲಾಗಿರುವ ಚಿನ್ನದ ಶುದ್ದತೆಗೆ ಇದೊಂದು ಪ್ರಮಾಣ ಪತ್ರ. ಈ ನಿಯಮ ಜಾರಿಗೊಳಿಸಿದ ನಂತರ, ಎಲ್ಲಾ ಆಭರಣಕಾರರು ಮಾರಾಟ ಮಾಡುವ ಮೊದಲು ಹಾಲ್ ಮಾರ್ಕಿಂಗ್ ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದರು.
ಜ.15 ರಿಂದ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯ
Follow Us