ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಸೇರಿದಂತೆ ದೇಶದ ಹಲವೆಡೆ ಸಂಭ್ರಮೋತ್ಸಾಹದಿಂದ ಹೊಸ ವರ್ಷವನ್ನು ಸ್ವಾಗತಿಸಲಾಯಿತು.
ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಕೇಕೆ, ಕುಣಿದು ಕುಪ್ಪಳಿಸುತ್ತ, ಡಾನ್ಸ್, ಮಸ್ತಿ ಜತೆಗೆ ಹೊಸ ವರ್ಷಕ್ಕೆ ಶುಭ ಕೋರಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
2020ರಲ್ಲೂ ನವ ಭಾರತ ನಿರ್ಮಾಣಕ್ಕೆ 130 ಕೋಟಿ ಜನರ ಯತ್ನ ಮುಂದುವರೆಯುವ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹೊಸ ವರ್ಷಕ್ಕೆ ಶುಭಾಶಯ ಕೋರುವ ಟ್ವೀಟ್ ಜತೆ 2020 ಹೊಸ ವರ್ಷಾಚರಣೆಗೆ ಸಂಬಂಧಿಸಿದ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.
ವಿಡಿಯೋದಲ್ಲಿ ಕರ್ತಾರ್ ಪುರ ಕಾರಿಡಾರ್ ಯೋಜನೆ, ವಿಧಿ 370ರ ರದ್ಧತಿ, ಸೆಮಿ ಹೈಸ್ಪೀಡ್ ರೈಲು, ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಹಲವು ವಿಚಾರಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡ ವಾಯುಸೇನೆಯನ್ನು, ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಎ-ಸ್ಯಾಟ್ ಅಭಿವೃದ್ಧಿ ಪಡಿಸಿದ ಇಸ್ರೋ ಮತ್ತು ಡಿಆರ್ ಡಿಒ ಸಂಸ್ಥೆಗಳನ್ನು ಶ್ಲಾಘಿಸಲಾಗಿದೆ.
ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ
Follow Us