newsics.com
ಮುಂಬೈ: ಮಹಾ ನಗರ ಮುಂಬೈನ ಖಾರ್ ಪ್ರದೇಶದಲ್ಲಿ ಸಾವಿರಾರು ಜನರ ಮುಂದೆ ಕೊರಿಯಾದ ಯೂ ಟ್ಯೂಬರ್ ಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ಶೇಕ್ ಮತ್ತು ಮೊಹಮ್ಮದ್ ಅನ್ಸಾರಿ ಎಂದು ಗುರುತಿಸಲಾಗಿದೆ.
ಓರ್ವ ಆರೋಪಿ ಯುವತಿಯ ಕೈ ಹಿಡಿದು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದ ದೃಶ್ಯ ವೈರಲ್ ಆಗಿತ್ತು.
ಲೈವ್ ಸ್ಟ್ರೀಮ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.