ಮುಂಬೈ: ‘ಸಾಲು ಮರದ ತಿಮ್ಮಕ್ಕ 73 ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ. ಆದರೆ ಕೆಲವೇ ಜನರಿಗೆ ಮಾತ್ರ ಇವರ ಬಗ್ಗೆ ಅರಿವಿದೆ. ಅಜ್ಜಿ ನಿಮಗೆ ಅಭಿನಂದನೆಗಳು’ ಎಂದು ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಮೂಲದ ಸಾಲು ಮರದ ತಿಮ್ಮಕ್ಕನ ಬಗ್ಗೆ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ವೃಕ್ಷ ಮಾತೆಯ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಅನಕ್ಷರಸ್ಥೆ, ಆದರೆ ಪ್ರಕೃತಿಯ ಮೇಲಿನ ಪ್ರೀತಿಯ ವಿಚಾರದಲ್ಲಿ ಯಾವ ಅಕ್ಷರಸ್ಥನಿಗೂ ಸಾಟಿಯಾಗಲಾರದ ಸಾಧನೆ ಮಾಡಿದ್ದಾರೆ. ಯಾವುದೇ ನಿರೀಕ್ಷೆಯಿಲ್ಲದೆ ಸಾವಿರ ಸಾವಿರ ಮರಗಳನ್ನು ಪ್ರೀತಿಯಿಂದ ಮಕ್ಕಳಂತೆ ಪೋಷಿಸಿದ ವೃಕ್ಷ ಮಾತೆ ಆಕೆ. ಆದರೆ ಮಾಡಿದ ಸಾಧನೆಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಪುರಸ್ಕಾರಗಳೇ ಈ ಸಾಧಕಿಯನ್ನು ಹುಡುಕಿಕೊಂಡು ಬಂದಿದೆ ಎಂದು ಹೇಳಿದ್ದಾರೆ.
ತುಮಕೂರಿನ ಹೊಸೂರು ಗ್ರಾಮದಲ್ಲಿ ಜನಿಸಿದ ತಿಮ್ಮಕ್ಕ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮಕ್ಕೆ ಮದುವೆಯಾಗಿ ಹೋದರು. ಆದರೆ ಮಕ್ಕಳಾಗದ ದುಃಖ ಮರೆಯಲು ಸಾಳುವರದ ತಿಮ್ಮಕ್ಕ ಆಲದ ಗಿಡಗಳನ್ನು ನೆಡಲು ಆರಂಭಿಸಿದರು. ಅದನ್ನು ಮಕ್ಕಳಂತೆಯೇ ಪೋಷಿಸಿದರು.
ಸಾಲು ಮರದ ತಿಮ್ಮಕ್ಕನಿಗೆ ಹರ್ಭಜನ್ ಸಿಂಗ್ ಟ್ವೀಟ್ ಅಭಿನಂದನೆ
Follow Us