Wednesday, November 25, 2020

ಕೊರೋನಾಗೆ ಹೆದರಿ ಹರಿಯಾಣದ ಮಹಿಳಾ ಐಎಎಸ್ ಅಧಿಕಾರಿ ರಾಜೀನಾಮೆ

ಚಂಡೀಘರ್: ಕೊರೋನಾಗೆ ಹೆದರಿ ಹರಿಯಾಣದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
2014ನೇ ಬ್ಯಾಚ್ ಐಎಎಸ್ ಅಧಿಕಾರಿ ರಾಣಿ ನಗರ್ ಅವರೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದವರು. ಸರ್ಕಾರಿ ಕರ್ತವ್ಯದಲ್ಲಿ ವೈಯಕ್ತಿಕ ಸುರಕ್ಷತೆಯಿಲ್ಲ ಎಂಬ ಆತಂಕದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಮೇ 4ರಿಂದಲೇ ಜಾರಿಗೆ ಬರುವಂತೆ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್)ಯ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಮಹಿಳಾ ಐಎಸ್‌ಎ ಅಧಿಕಾರಿ ರಾಣಿ ನಗರ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹರಿಯಾಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಹೆಚ್ಚುವರಿ ನಿರ್ದೇಶಕರಾಗಿ ರಾಣಿ ನಗರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 4ರಂದೇ ಐಎಎಸ್ ಅಧಿಕಾರಿ ರಾಣಿ ನಗರ್ ತಮ್ಮ ರಾಜೀನಾಮೆ ಪತ್ರವನ್ನು ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವುದಾಗಿ ರಾಣಿ ನಗರ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಇದು ಅಂಬಿ ದೇಗುಲ; ಅಭಿಮಾನಿಗಳ ಆದರ

newsics.com ಮಂಡ್ಯ: ರೆಬೆಲ್ ಸ್ಟಾರ್, ಸ್ನೇಹಜೀವಿ ಅಂಬರೀಷ್ ಅವರಿಗೆ ದೇಗುಲ ನಿರ್ಮಿಸಿ ಈ ಊರಿನ ಜನ ಭಾರೀ ಅಭಿಮಾನ ಮೆರೆದಿದ್ದಾರೆ. ಮಂಡ್ಯ ಅದರಲ್ಲೂ...

ಕೊರೋನಾ ಲಸಿಕೆ ವಿತರಣೆ; ರಾಜ್ಯಾದ್ಯಂತ 29,451 ಕೇಂದ್ರ ಸ್ಥಾಪನೆ

newsics.com ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್...

ಚಿನ್ನ ಅಕ್ರಮ ಸಾಗಣೆ; ಏರ್ ಇಂಡಿಯಾ ಸಿಬ್ಬಂದಿ ಬಂಧನ

newsics.com ನವದೆಹಲಿ: ಚಿನ್ನ ಕಳ್ಳ ಸಾಗಣೆ ಆರೋಪದಡಿ ಏರ್ ಇಂಡಿಯಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.ಸಾಗಣೆ ಮಾಡಲಾದ ಚಿನ್ನದ ಮೌಲ್ಯ ಸುಮಾರು 45 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಎರಡು ಗಂಟೆಗಳ ನಿರಂತರ...
- Advertisement -
error: Content is protected !!