newsics.com
ಲಕ್ನೋ: ಹತ್ರಾಸ್ ಗ್ರಾಮದಲ್ಲಿ ಈಗ ಪೊಲೀಸರ, ಮಾಧ್ಯಮದವರ ಸಂಚಾರ ಹೆಚ್ಚಾಗಿದೆ. ಹೀಗಾಗಿ ಇಲ್ಲಿ ಕೊರೋನಾ ಸೋಂಕಿನ ಭೀತಿ ಹೆಚ್ಚಿದೆ.
ಪೊಲೀಸರೂ ಸೇರಿದಂತೆ ಹಲವರಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದ್ದು, ಒಂದು ವೇಳೆ ಪರೀಕ್ಷಾ ವರದಿ ಪಾಸಿಟಿವ್ ಬಂದರೆ, ಸರ್ಕಾರ ಹತ್ರಾಸ್ ಗ್ರಾಮವನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸುವ ಸಾಧ್ಯತೆ ಇದೆ. ನಂತರ ಮಾಧ್ಯಮದವರೂ ಸೇರಿ ಹೊರಗಿನವರ ಪ್ರವೇಶಕ್ಕೆ ನಿರ್ಬಂಧ ಹೇರಲಾಗುವುದು ಎಂದು ಹತ್ರಾಸ್ ಜಿಲ್ಲಾ ದಂಡಾಧಿಕಾರಿ ಪ್ರವೀಣ್ ಕುಮಾರ್ ಹೇಳಿದ್ದಾರೆ. ಸಂತ್ರಸ್ತ ಯುವತಿಯ ವೈದ್ಯಕೀಯ ಪರೀಕ್ಷೆ ವರದಿ ಬಗ್ಗೆ ಮಾತನಾಡಿದ ಅವರು, ಯುವತಿಯ ಗುಪ್ತಾಂಗದಲ್ಲಿ ಯಾವುದೇ ಗಾಯಗಳಾಗಿಲ್ಲ. ಮಾದರಿಯನ್ನು ಆಗ್ರಾದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಮೂರು ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ ಎಂದರು. ಭಗವಾನ್ ಸ್ವರೂಪ್ ನೇತೃತ್ವದ ಸಿಟ್ ತಂಡ ಹತ್ರಾಸ್ ತಲುಪಿದ್ದು, ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಈಗ ಹತ್ರಾಸ್’ನಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ.
ಹತ್ರಾಸ್ ಗ್ರಾಮ ‘ಕಂಟೈನ್ಮೆಂಟ್ ಜೋನ್’ ಘೋಷಣೆ ಸಾಧ್ಯತೆ
Follow Us