Newsics.com
ನವದೆಹಲಿ: ಮಹಾಮಾರಿ ಕೊರೋನಾದಿಂದಾಗಿ ಆರೋಗ್ಯ ವಿಮೆ ಪಾವತಿಯಲ್ಲಿ ಭಾರೀ ಹೆಚ್ಚಳವಾಗಿದೆ. ಇದರಿಂದ ನಿವೃತ್ತರಾದವರು ಸೇರಿದಂತೆ ಎಲ್ಲ ವರ್ಗದ ಪಾಲಿಸಿದಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಶೇಕಡ 5 ಮಂದಿ ಪಾಲಿಸಿದಾರರ ವಿಮೆ ಪಾವತಿ ಮೊತ್ತದಲ್ಲಿ ಶೇಕಡ 50ರಿಂದ 100ರಷ್ಟು ಹೆಚ್ಚಳವಾಗಿದೆ. ವಿಮಾ ನಿಯಂತ್ರಣ ಪ್ರಾಧಿಕಾರ, ಆರೋಗ್ಯ ವಿಮೆಯ ವ್ಯಾಪ್ತಿ ಹೆಚ್ಚಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ದೇಶದಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ತಲೆದೋರಿದರೆ, ಸಾಲದ ಸುಳಿಯಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೋನಾ ಮಹಾ ಮಾರಿಗೆ ಚಿಕಿತ್ಸೆ ಗೆ ರಾಜ್ಯ ಸರ್ಕಾರಗಳು ಚಿಕಿತ್ಸಾ ದರ ಪ್ರಕಟಿಸಿದ್ದರೂ, ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಇದನ್ನು ಪಾಲಿಸುತ್ತಿಲ್ಲ. ಹಲವು ಇತರ ಲೆಕ್ಕಗಳನ್ನು ಡಿಸ್ ಚಾರ್ಜ್ ಲಿಸ್ಟ್ ನಲ್ಲಿ ಸೇರಿಸಲಾಗುತ್ತಿದೆ ಎಂಬ ಆರೋಪ ಸಾಮಾನ್ಯವಾಗಿದೆ.
ಈ ಹಿನ್ನೆಲೆಯಲ್ಲಿ ವಿಮಾ ಸಂಸ್ಥೆಗಳು ಆರೋಗ್ಯ ವಿಮೆ ದರ ಹೆಚ್ಚಳ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.