ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರ ರಾತ್ರಿಯಿಂದ ಆರಂಭವಾದ ಮಳೆ ಈಗಲೂ ಮುಂದುವರಿದಿದೆ. ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ದೆಹಲಿಯಲ್ಲಿ ಬಸ್ ವೊಂದು ನೀರಿನಲ್ಲಿ ಮುಳುಗಿದೆ. ಇದರಲ್ಲಿದ್ದ ಪ್ರಯಾಣಿಕರನ್ನು ಪಾರು ಮಾ಼ಡಲಾಗಿದೆ.
ಮುಂದಿನ ಎರ಼ಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಯಿದೆ. ಕೊರೋನಾ ಮಹಾ ಮಾರಿಯ ಮಧ್ಯೆ ಮಳೆಯ ಅಬ್ಬರದಿಂದ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಮುಂಗಾರು ಮಳೆ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮ ಗಳನ್ನು ಸ್ಥಳೀಯಾಡಳಿತ ತೆಗೆದುಕೊಂಡಿಲ್ಲ. ಇದರಿಂದ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದೆ. ವಾಹನ ಸವಾರರು ಪರದಾಡುವಂತಾಗಿದೆ