newsics.com
ತಿರುವನಂತರಪುರಂ: ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಟ್ಟಾಯಾಂ, ಪಥನಮ್ತಿಟ್ಟಾ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶ್ಯೂರ್ ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಮೂವರು ಮೃತಪಟ್ಟಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಕೇರಳದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಗಾಇದ್ದು, ಪ್ರವಾಹದ ತೀವ್ರತೆ ಬಿಂಬಿಸುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ವಾಹನ ಸವಾರರು ರಸ್ತೆ ದಾಟಲು ಪರದಾಡ ನಡೆಸುತ್ತಿದ್ದಾರೆ. ಕೇರಳ ಸಾರಿಗೆ ಬಸ್ವೊಂದು ಪ್ರವಾಹದಲ್ಲಿ ಸಿಲುಕಿದ್ದು, ಪ್ರಯಾಣಿಕರು ಹರಸಾಹಸಪಟ್ಟು ಹೊರಬರುತ್ತಿರುವ ದೃಶ್ಯ ಸೆರೆಯಾಗಿದೆ.
ಕೇರಳ ರಾಜ್ಯ ಸರ್ಕಾರದ ಮನವಿ ಮೇರೆಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳು ಕೇರಳಕ್ಕೆ ಆಗಮಿಸಿವೆ. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಎನ್ಡಿಆರ್ಎಫ್ ತಂಡ ಸನ್ನದ್ಧವಾಗಿದೆ. ಈಗಾಗಲೇ 30 ಸೈನಿಕರ ಸೇನಾ ತುಕಡಿಯನ್ನು ಪಾಂಗೋಡಿನಿಂದ ಕೊಟ್ಟಾಯಂ ಜಿಲ್ಲೆಯ ಕಂಜೀರಪಲ್ಲಿಗೆ ಸ್ಥಳಾಂತರಿಸಲಾಗಿದೆ. ಇಡುಕ್ಕಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, 22 ಜನ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಇನ್ನು ತ್ರಿಶ್ಯೂರ್ ಜಿಲ್ಲೆಯಲ್ಲಿ ಭೂ ಕುಸಿತವಾಗುತ್ತಿದ್ದು, ಮುಂದಿನ ಮೂರು ದಿನ ಪ್ರವಾಸಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಕೊಟ್ಟಾಯಂನಲ್ಲೂ ಜನರು ಕಾಣೆಯಾಗಿರುವ ಬಗ್ಗೆ ವರದಿಗಳು ತಿಳಿಸಿವೆ.
ಕೇರಳ ಪ್ರವಾಸಗಳನ್ನು ಮುಂದೂಡುವಂತೆ ಪ್ರವಾಸಿಗರಿಗೆ ಸಿಎಂ ಮನವಿ ಮಾಡಿದ್ದಾರೆ. ಅಕ್ಟೋಬರ್ 17 ಮತ್ತು 18 (ಭಾನುವಾರ, ಸೋಮವಾರ) ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Visuals from Kanjirapally as a bus is caught in flood waters and people had to be rescued.
P.S: Rains are slowly reducing, but it will pick up pace anytime soon. Danger remains till tomorrow noon. Do not step out unless local govt authorities tell you to do so. #keralarains pic.twitter.com/5bzhmWud8g
— West Coast Weatherman (@RainTracker) October 16, 2021