newsics.com
ನವದೆಹಲಿ: ಜಮ್ಮುವಿನ ರಾಜ್‌ನೀತ್ ಸಾಗರ್ ಅಣೆಕಟ್ಟೆಯಲ್ಲಿ ಪತನಗೊಂಡಿದ್ದ ಸೇನೆಯ ಹೆಲಿಕಾಪ್ಟರ್‌ನ ಪೈಲಟ್ ಒಬ್ಬರ ಶವ ದುರಂತ ನಡೆದ 12 ದಿನದ ಬಳಿಕ ಪತ್ತೆಯಾಗಿದೆ. ಇನ್ನೊಬ್ಬ ಪೈಲಟ್ ಪತ್ತೆಗಾಗಿ ಶೋಧ ಮುಂದುವರಿದಿದೆ.
ಲೆಫ್ಟಿನಂಟ್ ಕರ್ನಲ್ ಎ.ಎಸ್.ಬಾತ್ ಅವರ ಶವ ಅಣೆಕಟ್ಟೆಯ 75.9 ಮೀಟರ್ ಆಳದಲ್ಲಿ ಪತ್ತೆಯಾಗಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಬ್ಬರು ಪೈಲಟ್‌ಗಳಿದ್ದ ಹೆಲಿಕಾಪ್ಟರ್ ಆ.3ರಂದು ಅಣೆಕಟ್ಟೆ ಪ್ರದೇಶದಲ್ಲಿ ಪತನಗೊಂಡಿತ್ತು.