Wednesday, May 25, 2022

ಸಲಿಂಗಿ ದಂಪತಿಗೆ ರಕ್ಷಣೆ ನೀಡಿ: ಅಲಹಾಬಾದ್ ಹೈಕೋರ್ಟ್ ಆದೇಶ

Follow Us

NEWSICS.COM

ಉತ್ತರಪ್ರದೇಶ: ಸಲಿಂಗಿ ದಂಪತಿಗಳಾದ ಶಾಮ್ಲಿಯ ಸುಲ್ತಾನಾ ಮಿರ್ಜಾ ಮತ್ತು ಕಿರಣ್ ರಾಣಿಗೆ ಸಮಾಜ ಹಾಗೂ ಕುಟುಂಬದಿಂದ ಬೆದರಿಕೆ ಇರುವ ಕಾರಣ ಭದ್ರತೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶದ ಶಾಮ್ಲಿಯ ಪೊಲೀಸ್ ವರಿಷ್ಠಾಧಿಕಾರಿಗೆ ದಂಪತಿಗೆ ರಕ್ಷಣೆ ನೀಡುವಂತೆ ಆದೇಶಿಸಿದೆ.

ನವತೇಜ್ ಸಿಂಗ್ ಜೋಹರ್ ಪ್ರಕರಣವನ್ನು ಉಲ್ಲೇಖಿಸಿ ಅರ್ಜಿದಾರರು ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ. ಆದರೆ ಸಲಿಂಗಿಗಳಾಗಿರುವುದರಿಂದ ನಮ್ಮ ಕುಟುಂಬಗಳು ಮತ್ತು ಸಮಾಜದಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ ಇದರಿಂದಾಗಿ ಜೀವ ಭಯ ಕೂಡ ಇದೆ. ಆದ್ದರಿಂದ ರಕ್ಷಣೆ ನೀಡುವಂತೆ ಕೋರಿದ್ದರು.

ನ್ಯಾಯಪೀಠವು, ಲೈಂಗಿಕ ದೃಷ್ಟಿಕೋನವು ಮಾನವನಿಗೆ ಸಹಜವಾಗಿದೆ. ಆದರೆ ಇವರು ಸಮಾಜದಲ್ಲಿ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ ಎಂದಿದೆ.

ಕಂಬಿ ನುಸುಳಲು ‌‌‌ಯತ್ನಿಸಿ ಆನೆ ಸಾವು

ಮತ್ತಷ್ಟು ಸುದ್ದಿಗಳು

Latest News

ಮಹಿಳೆಯರ ಟಿ 20 ಚಾಲೆಂಜ್​ನಲ್ಲಿ ಮಾಯಾ ವಿಚಿತ್ರ ಬೌಲಿಂಗ್​ : ವಿಡಿಯೋ ವೈರಲ್

newsics.com ಮಹಿಳಾ ಟಿ 20 ಚಾಲೆಂಜ್​ನಲ್ಲಿ ಸೂಪರ್​ನೋವಾಸ್​ ವಿರುದ್ಧದ ಪಂದ್ಯದಲ್ಲಿ ಬೌಲರ್​​ ಮಾಯಾ ಸೋನಾವಾನೆ ವಿಚಿತ್ರವಾಗಿ ಬೌಲಿಂಗ್​ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ. ಮಾಯಾ...

ಮಳಲಿ ಮಸೀದಿಯಲ್ಲಿ ದೇಗುಲ ಕುರುಹು ಪತ್ತೆ ವಿವಾದ : ತಾಂಬೂಲ ಪ್ರಶ್ನೆಗೆ ಕ್ಷಣಗಣನೆ

newsics.com ಮಂಗಳೂರು ಹೊರವಲಯದಲ್ಲಿರುವ ಗಂಜಿಮಠ ಸಮೀಪದಲ್ಲಿರುವ ಮಳಲಿ ಮಸೀದಿ ನವೀಕರಣ ಕಾರ್ಯದ ವೇಳೆಯಲ್ಲಿ ಹಿಂದೂ ದೇವಾಲಯದ ಕುರುಹುಗಳು ಪತ್ತೆಯಾದ ಸಂಬಂಧ ಇಂದು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​ ತಾಂಬೂಲ ಪ್ರಶ್ನೆ ಆಯೋಜಿಸಿದೆ. ಹಿಂದೂ ಧರ್ಮದ...

ಬಿಹಾರ ರಾಜ್ಯಸಭೆಗೆ ಅವಿರೋಧ ಆಯ್ಕೆಯಾದ ಕನ್ನಡಿಗ

newsics.com ಬಿಹಾರ ರಾಜ್ಯಸಭೆಗೆ ಉಡುಪಿ ತಾಲೂಕಿನ ಸಳ್ವಾಡಿ ಮೂಲದ ಅನಿಲ್​ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಡಾ. ಮಹೇಂದ್ರ ಪ್ರಸಾದ್​ ನಿಧನದ ಬಳಿಕ ತೆರವಾಗಿದ್ದ ಈ ಸ್ಥಾನಕ್ಕೆ ಅನಿಲ್​ ಹೆಗ್ಡೆ ಹೆಸರನ್ನು ಬಿಹಾರ ಸಿಎಂ ನಿತೀಶ್​ ಕುಮಾರ್...
- Advertisement -
error: Content is protected !!