NEWSICS.COM
ಮಧ್ಯಪ್ರದೇಶ: ಮಧ್ಯಪ್ರದೇಶದ ಬಂದವಾಗರ್ ಟೈಗರ್ ರಿಸರ್ವ್ ನಲ್ಲಿ ದೇಶದ ಮೊದಲ ಬಿಸಿಗಾಳಿ ಬಲೂನ್ ವನ್ಯಜೀವಿ ಸಫಾರಿ ಪ್ರಾರಂಭಿಸಲಾಗಿದೆ.
ಶುಕ್ರವಾರ (ಡಿ.25) ಮಧ್ಯಪ್ರದೇಶ ಅರಣ್ಯ ಸಚಿವ ವಿಜಯ್ ಷಾ ಚಾಲನೆ ನೀಡಿದ್ದಾರೆ.
ಇದನ್ನು ಬಫರ್ ಪ್ರದೇಶಕ್ಕೆ ಸೀಮಿತಗೊಳಿಸಲಾಗುವುದು , ಸಫಾರಿಗೆ ಬರುವ ಜನರು ಹುಲಿ, ಚಿರತೆ ಸೇರಿದಂತೆ ಎಲ್ಲ ಪ್ರಾಣಿಗಳನ್ನು ಎತ್ತರದಿಂದ ನೋಡಬಹುದಾಗಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಇದನ್ನು ಪ್ರಾರಂಭಿಸಲಾಗಿದೆ. ಪ್ರವಾಸಿಗರಿಗೆ ಹೊಸ ಸಾಹಸದ ಅನುಭವ ದೊರೆಯಲಿದೆ ಎಂದು ಸಚಿವರು ಹೇಳಿದ್ದಾರೆ.