newsics.com
ನವದೆಹಲಿ: ಹೋಟೆಲ್, ರೆಸ್ಟೋರೆಂಟ್ಗಳು ಗ್ರಾಹಕರಿಂದ ಸರ್ವೀಸ್ ಚಾರ್ಜ್ ಸಂಗ್ರಹಿಸುವಂತಿಲ್ಲ ಹಾಗೂ ಗ್ರಾಹಕರಿಗೆ ಸರ್ವೀಸ್ ಚಾರ್ಜ್ ನೀಡುವಂತೆ ಬಲವಂತ ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಇಂದು ಆದೇಶ ಹೊರಡಿಸಿದೆ.
ಆದಾಗ್ಯೂ ಹೋಟೆಲ್ ಗಳು ಸರ್ವಿಸ್ ಚಾರ್ಜ್ ಕೇಳಿದರೆ ರಾಷ್ಟ್ರೀಯ ಗ್ರಾಹಕರ ಹೆಲ್ತ್ ಲೈನ್ಗೆ 1915ಗೆ ದೂರು ನೀಡಬಹುದು ಎಂದು ಸಿಸಿಪಿಎ ತಿಳಿಸಿದೆ.
ಈಗಾಗಲೇ ರೆಸ್ಟೋರೆಂಟ್ಗಳು ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಿದ್ದು, ಈ ಮಧ್ಯೆ ಸೇವಾ ಶುಲ್ಕ ಗ್ರಾಹಕರಿಕೆ ಹೊರೆಯಾಗುತ್ತದೆ. ಹೀಗಾಗಿ ಸೇವಾ ಶುಲ್ಕ ವಿಧಿಸುವುದು ಗ್ರಾಹಕರ ಹಕ್ಕುಗಳಿಗೆ ವಿರುದ್ಧ ಎಂದು ಈ ಮಾರ್ಗಸೂಚಿಯನ್ನು ಹೊರಡಿಸಿದೆ.