newsics.com
ಹ್ಯಾಂಗ್ ಝೂ: ಹಾಂಗ್ ಕಾಂಗ್ ದೇಶದ 12 ವರ್ಷದ ಚೆಸ್ ಆಟಗಾರ್ತಿ ಆಗಿರುವ ಲಿಯು ಟಿಯಾನ್-ಯಿ ಅವರು ತನ್ನ ಮೊಬೈಲ್ ಕಳೆದುಕೊಂಡಿದ್ದಾರೆ. ಇದಕ್ಕಾಗಿ ಅಲ್ಲಿನ ಸ್ವಯಂಸೇವಕರು ಕಸದ ಬ್ಯಾಗಗಳನ್ನು ಹುಡುಕಾಡಿದ್ದಾರೆ.
ಕ್ರೀಡಾಕೂಟದಲ್ಲಿ ಸ್ವಯಂಸೇವಕರು ಆ ಮೊಬೈಲನ್ನು ಹುಡುಕುವುದು ‘ಮಿಷನ್ ಇಂಪಾಸಿಬಲ್’ ಅಲ್ಲ ಎಂದು ಸಾಬೀತುಪಡಿಸಿದರು. ಅವರು 5,23,000 ಚದರ ಮೀಟರ್ ವಿಸ್ತಾರದ ಕ್ರೀಡಾಂಗಣದಲ್ಲಿ ಮೊಬೈಲನ್ನು ಪತ್ತೆಹಚ್ಚಲು ಪ್ರಾರಂಭಿಸಿದರು.
10,000-ಆಸನವುಳ್ಳ ಕ್ರೀಡಾಂಗಣದಲ್ಲಿ ಲಿಯು ಟಿಯಾನ್-ಯಿ ಮೊಬೈಲ್ ಕಳೆದುಕೊಂಡಿದ್ದಾರೆ. ಯಾರಾದರೂ ಆದರೆ ಅದನ್ನು ಹುಡಕಲು ಅಸಾಧ್ಯವೆಂದು ಹುಡಕದೆ ಬಿಡುತ್ತಿದ್ದರು ಏನೋ ಆದರೆ ಏಷ್ಯನ್ ಗೇಮ್ಸ್ ಸ್ವಯಂ ಸೇವಕರು ಅಂದರೆ ಅಲ್ಲಿನ ಸಿಬ್ಬಂದಿಗಳು ಕಳೆದು ಹೋದ ಮೊಬೈಲ್ ನ್ನು ಯಾವ ಹರಸಾಹಸಕ್ಕೂ ಕಮ್ಮಿಯಿಲ್ಲದ ಹಾಗೆ ಪತ್ತೆ ಮಾಡಿದ್ದಾರೆ.
ಮೊಬೈಲ್ ಹುಡುಕಲು ಸ್ವಯಂ ಸೇವಕರು ಮೈದಾನದೆಲ್ಲೆಡೆ ಹುಡುಕಾಡಿದ್ದಾರೆ. ಇದು ಮಾತ್ರವಲ್ಲದೆ ಕಸದ ಚೀಲದಲ್ಲೂ ಹುಡುಕಾಟ ನಡೆಸಿದ್ದಾರೆ. ರಾತ್ರಿಯಿಡೀ ಸಾವಿರಾರು ಕಸದ ಚೀಲದಲ್ಲಿ ಹುಡುಕಿದ ಪರಿಣಾಮ ಒಂದು ಕಸದ ಚೀಲದ ಬ್ಯಾಗ್ ನಲ್ಲಿ ಮೊಬೈಲ್ ಪತ್ತೆಯಾಗಿದೆ.
ಹಾಟ್ ವಿಡಿಯೋ ಹರಿಬಿಟ್ಟ ಪೂನಂ ಪಾಂಡೆ; ಸಖತ್ ಹಾಟ್ ಎಂದು ಫ್ಯಾನ್ಸ್!