newsics.com
ರಾಜಸ್ಥಾನ: ಇಲ್ಲಿಯ ಪೆಟ್ರೋಲ್ ಬಂಕ್‌ವೊಂದು ಖಾಲಿ ಹಾಲಿನ ಪ್ಯಾಕೆಟ್, ಪ್ಲಾಸ್ಟಿಕ್ ಬಾಟಲ್ ಕೊಟ್ರೆ ರಿಯಾಯಿತಿಯಲ್ಲಿ ಪೆಟ್ರೋಲ್, ಡೀಸೆಲ್ ನೀಡುವ ಅಭಿಯಾನವನ್ನು ಆರಂಭಿಸಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಆಗಿದೆಯೆಂದು ಹಲವರು ಚಿಂತೆ ಮಾಡುತ್ತಿರುತ್ತಾರೆ. ಆದರೆ ಇಲ್ಲಿ ಪೆಟ್ರೋಲ್, ಡೀಸೆಲ್‌ಗೆ ಡಿಸ್ಕೌಂಟ್ ಕೊಡುವ ಸಾಹಸಕ್ಕೆ ಕೈ ಹಾಕಿದೆ. ಆದರೆ ಕಂಡೀಷನ್ಸ್ ಅಪ್ಲೈ.
ಭಿಲ್ವಾರಾದಲ್ಲಿರುವ ಈ ಪೆಟ್ರೋಲ್ ಬಂಕ್‌ಗೆ ಹೋದರೆ ನೀವು ಒಂದು ಲೀಟರ್ ಪೆಟ್ರೋಲ್‌ಗೆ ರೂ. 1 ಡಿಸ್ಕೌಂಟ್ ಹಾಗೂ ಡೀಸೆಲ್‌ಗೆ 50 ಪೈಸೆ ಡಿಸ್ಕೌಂಟ್ ಪಡೆಯಲು ನೀವು ಖಾಲಿ ಹಾಲಿನ ಪ್ಯಾಕೆಟ್‌ಗಳನ್ನು ಹಾಗೂ ಪ್ಲಾಸ್ಟಿಕ್ ನೀರಿನ ಬಾಟಲ್‌ಗಳನ್ನು ಅವರಿಗೆ ಕೊಡಬೇಕು. ಕೇಂದ್ರ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್ ಬ್ಯಾನ್ ಮಾಡಿದ ಬಳಿಕ ಇದರಿಂದ ಉತ್ತೇಜಿತರಾದ ಛಗನ್‌ಲಾಲ್ ಭಗ್ತಾವರ್ಮಾಲ್ ಪೆಟ್ರೋಲ್ ಪಂಪ್‌ನ ಮಾಲೀಕ ಅಶೋಕ್ ಕುಮಾರ್ ಮುಂದ್ರಾ ಜನರನ್ನು ಉತ್ತೇಜಿಸಲು ಈ ಕ್ರಮ ಕೈಗೊಂಡಿದ್ದಾರೆ.
ಜುಲೈ 15ರಂದು ಈ ಸಂಬಂಧದ 3 ತಿಂಗಳ ಕಾಲ ಜಾಗೃತಿ ಅಭಿಯಾನ ಆರಂಭಿಸಿರುವ ಅಶೋಕ್ ಕುಮಾರ್ ಮುಂದ್ರಾ ಅವರಿಗೆ ರಾಜಸ್ಥಾನದ ಸರಸ್ ಡೈರಿ, ಭಿಲ್ವಾರಾ ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಬಲ ಸೂಚಿಸಿದೆ.
ಸ್ಯಾಂಡಲ್‌ವುಡ್ ನವ ನಾಯಕಿ ವಿರುದ್ಧ ಭುಗಿಲೆದ್ದ ವಿವಾದ, ಮಾಲಾಶ್ರೀ ಹೇಳಿಕೆಗೆ ಆಕ್ರೋಶ