ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದ ಹೆಸರು ಬದಲಾಯಿಸಿದೆ. ಇನ್ನು ಮುಂದೆ ಅದು ಶಿಕ್ಷಣ ಸಚಿವಾಲಯವಾಗಿ ಗುರುತಿಸಿಕೊಳ್ಳಲಿದೆ. ಈ ದಿಢೀರ್ ಬದಲಾವಣೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ದೇಶದಲ್ಲಿ ದಿನದಿಂದ ದಿನಕ್ಕೆ ಶಿಕ್ಷಣ ಇಲಾಖೆಯ ಮಹತ್ವ ಹೆಚ್ಚಾಗುತ್ತಿದೆ. ಲಾಕ್ ಡೌನ್ ನಿಂದಾಗಿ ಇಡೀ ದೇಶದ ಶಿಕ್ಷಣ ವ್ಯವಸ್ಥೆಯ ಸ್ವರೂಪವೇ ಬದಲಾಗಿದೆ. ಆನ್ ಲೈನ್ ಶಿಕ್ಷಣ ಅನಿವಾರ್ಯ ಎಂಬ ಹಂತ ತಲುಪಲಾಗಿದೆ. ಈ ಹಂತದಲ್ಲಿ ಸಚಿವಾಲಯದ ಹೆಸರು ಕೂಡ ಬದಲಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.