newsics.com
ನವದೆಹಲಿ: ದೇಶದಲ್ಲಿ ಅರಣ್ಯ ಚೋರರು ಆನೆಗಳನ್ನು ಗುರಿಯಾಗಿರಿಸಿ ದಾಳಿ ಮುಂದುವರಿಸಿದ್ದಾರೆ. 2021ರಲ್ಲಿ ದೇಶದಲ್ಲಿ 49 ಆನೆಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ವನ್ಯ ಜೀವಿ ಅಪರಾಧ ನಿಯಂತ್ರಣ ಬ್ಯೂರೋ ಈ ಮಾಹಿತಿ ಬಹಿರಂಗಪಡಿಸಿದೆ. ಪ್ರಕರಣ ಸಂಬಂಧ 77 ಮಂದಿಯನ್ನು ಬಂಧಿಸಲಾಗಿದೆ.
ಅತೀ ಹೆಚ್ಚು ಆನೆಗಳನ್ನು ಅಸ್ಸಾಂನಲ್ಲಿ ಹತ್ಯೆ ಮಾಡಲಾಗಿದೆ. 9 ಆನೆಗಳು ಕಳ್ಳ ಬೇಟೆಗಾರರ ಗುಂಡಿಗೆ ಬಲಿಯಾಗಿವೆ. ಒಡಿಶಾ ಮತ್ತು ತಮಿಳುನಾಡಿನಲ್ಲಿ ತಲಾ ಎಂಟು ಆನೆಗಳು ಪ್ರಾಣ ಕಳೆದುಕೊಂಡಿವೆ. ಕರ್ನಾಟಕ ಮತ್ತು ಉತ್ತರಾಖಂಡ್ ನಲ್ಲಿ ತಲಾ ಮೂರು ಆನೆಗಳು ಇದೇ ರೀತಿ ಸಾವನ್ನಪ್ಪಿವೆ ಎಂದು ವರದಿಯಲ್ಲಿ ತಿಳಿಸಿಲಾಗಿದೆ.
ಆನೆಗಳ ದಂತ ಕದಿಯಲು ಬೇಟೆಗಾರರು ಆನೆಗಳ ಹತ್ಯೆ ಮಾಡುತ್ತಿದ್ದಾರೆ.