newsics.com
ಆಂಧ್ರಪ್ರದೇಶ: ಬೀಗ ಹಾಕಿದ್ದ ಬಾಡಿಗೆ ಮನೆಯೊಳಗೆ ಡ್ರಂನಲ್ಲಿ ಮಹಿಳೆಯ ಶವದ ಭಾಗಗಳು ಪತ್ತೆಯಾಗಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಬಾಡಿಗೆದಾರರು ಕೆಲ ತಿಂಗಳಿಂದ ಬಾಡಿಗೆ ನೀಡದಕ್ಕೆ ಅನುಮಾನ ಬಂದು ಮನೆಯ ಮಾಲೀಕರು ಬಾಗಿಲು ಒಡೆದಿದ್ದು, ಡ್ರಮ್ ಒಳಗೆ ಮೃತದೇಹದ ಭಾಗಗಳು ಕಾಣಿಸಿವೆ. ಮೃತದೇಹ ಒಂದು ವರ್ಷದಿಂದ ಡ್ರಂನಲ್ಲಿಯೇ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪತ್ನಿ ಗರ್ಭಿಣಿ ಆಕೆ ತವರು ಮನೆಗೆ ಹೋಗಿದ್ದಾಳೆ ಎಂದು ಬಾಡಿಗೆದಾರ ಹೇಳಿದ್ದ. ತನ್ನ ವಸ್ತುಗಳನ್ನು ತೆಗೆದುಕೊಂಡು ಮನೆಗೆ ಬೀಗ ಹಾಕಿ ಆತ ಊರು ಬಿಟ್ಟಿದ್ದಾರೆ. ಮನೆಯ ಡ್ರಮ್ನಲ್ಲಿ ಹೆಂಡತಿಯ ಶವ ಬಚ್ಚಿಟ್ಟು ಪರಾರಿಯಾಗಿದ್ದಾನೆ