newsics.com
ಮುಂಬೈ: ಜಗಳ ಮಾಡಿ ಮನೆ ಬಿಟ್ಟು ಹೋದ ಪತ್ನಿಯನ್ನು ಮತ್ತೆ ಮನೆಗೆ ಕರೆ ತರಲು ಪತಿ ಮಾಡಿದ ಉಪಾಯದಿಂದ ಪತಿ ಇದೀಗ ಕಂಬಿ ಎಣಿಸುವಂತಾಗಿದೆ.
ಮುಂಬೈನ ಮಲಾಡ್ ಪೂರ್ವದಲ್ಲಿ ಈ ಪ್ರಕರಣ ವರದಿಯಾಗಿದೆ. ಮಗ ತೀರಿಹೋಗಿದ್ದಾನೆ , ಬೇಗ ಮನೆಗೆ ಬಾ ಎಂದು ಪತಿ ಪತ್ನಿಗೆ ಸಂದೇಶ ಕಳುಹಿಸಿದ್ದ.
ಮಗನನ್ನು ಮಲಗಿಸಿ ಅವನ ಮೈ ಮೇಲೆ ಬಿಳಿ ಬಟ್ಟೆ ಹೊದಿಸಲಾಗಿತ್ತು. ಹಾರ ಹಾಕಲಾಗಿತ್ತು. ಈ ಚಿತ್ರವನ್ನು ಹೆಂಡತಿಗೆ ಕಳುಹಿಸಿಕೊಟ್ಟಿದ್ದ. ಮಗಳು ಪಾರ್ಥಿವ ಶರೀರದ ಬಳಿ ನೀರು ಹಿಡಿದುಕೊಂಡು ನಿಂತಿದ್ದಳು.
ಪತ್ನಿ ಮನೆಗೆ ಬಂದ ಬಳಿಕ ಇದು ಪತಿ ಮಾಡಿದ ನಾಟಕ ಎಂದು ತಿಳಿಯಿತು. ಬಳಿಕ ಪೊಲೀಸರಿಗೆ ದೂರು ನೀಡಲಾಯಿತು. ಇದೀಗ ಪೊಲೀಸರು ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.