Tuesday, January 31, 2023

ಹೈದರಾಬಾದ್ ವಿರುದ್ಧ ಮುಂಬೈಗೆ 42 ರನ್ ಜಯ

Follow Us

newsics.com

ಅಬುಧಾಬಿ: ಹೈದರಾಬಾದ್‌ ಸನ್‌ ರೈಸರ್ಸ್‌ ವಿರುದ್ಧ 42 ರನ್‌‌ಗಳಿಂದ ಗೆದ್ದ ಮುಂಬೈ ಇಂಡಿಯನ್ಸ್‌ ಈ ಬಾರಿಯ ಐಪಿಎಲ್‌ನಿಂದ ಹೊರ ನಡೆದಿದೆ.

ಮುಂಬೈ ನೀಡಿದ 236 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 193 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ನಾಯಕ ಮನೀಶ್‌ ಪಾಂಡೆ ಔಟಾಗದೇ 69 ರನ್‌(41 ಎಸೆತ, 7 ಬೌಂಡರಿ, 2 ಸಿಕ್ಸ್‌) ಜೇಸನ್‌ ರಾಯ್‌ 34 ರನ್‌(21 ಎಸೆತ, 4 ಬೌಂಡರಿ) ಅಭಿಷೇಕ್‌ ಶರ್ಮಾ 33 ರನ್‌(16 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು.

ಶುಕ್ರವಾರದ ಪಂದ್ಯವನ್ನು 170ಕ್ಕೂ ಅಧಿಕ ರನ್‌ ಗಳಿಂದ ಮುಂಬೈ ಗೆದ್ದಿದ್ದರೆ ನೆಟ್‌ ರನ್‌ ರೇಟ್‌ ಆಧಾರದಲ್ಲಿ ಕೋಲ್ಕತ್ತಾ ಹಿಂದಿಕ್ಕಿ 4ನೇ ಸ್ಥಾನ ಪಡೆಯುತ್ತಿತ್ತು. ಆದರೆ ಮುಂಬೈ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಬೆಂಗಳೂರು ಮತ್ತು ಕೋಲ್ಕತ್ತಾ ಮಧ್ಯೆ ಎರಡನೇ ಪ್ಲೇ ಆಫ್‌ ಪಂದ್ಯ ನಡೆಯಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮುಂಬೈ ಮೊದಲ ಓವರಿನಿಂದ ಭರ್ಜರಿ ಆಟಕ್ಕೆ ಇಳಿದಿತ್ತು. ನಾಯಕ ರೋಹಿತ್‌ ಶರ್ಮಾ ಮತ್ತು ಇಶನ್‌ ಕಿಶನ್‌ ಮೊದಲ ವಿಕೆಟಿಗೆ 33 ಎಸೆತದಲ್ಲಿ 80 ರನ್‌ ಜೊತೆಯಾಟ ನೀಡಿದ್ದರು.

ರೋಹಿತ್‌ ಶರ್ಮಾ 18 ರನ್‌ ಗಳಿಸಿದರೆ ಇಶನ್‌ ಕಿಶನ್‌ 84 ರನ್‌(32 ಎಸೆತ, 11 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಔಟಾದರು. ಮುಂಬೈ 43 ಎಸೆತಗಳಲ್ಲಿ 100 ರನ್‌ಗಳ ಗಡಿಯನ್ನು ದಾಟಿತ್ತು. ಇಶನ್‌ ಕಿಶನ್‌ ನಂತರ ಸೂರ್ಯಕುಮಾರ್‌ ಯಾದವ್‌ 40 ಎಸೆತಗಳಲ್ಲಿ 82 ರನ್‌(13 ಬೌಂಡರಿ, 3‌ ಸಿಕ್ಸರ್) ಸಿಡಿಸಿ ತಂಡವನ್ನು 200 ರನ್‌ಗಳ ಗಡಿ ತಲುಪಿಸಿದ್ದರು.

ಡೆಲ್ಲಿ ವಿರುದ್ಧ ಆರ್‌ಸಿಬಿಗೆ 7 ವಿಕೆಟ್‌ಗಳ ಜಯ

ಮತ್ತಷ್ಟು ಸುದ್ದಿಗಳು

vertical

Latest News

ಇದೇ ಏ. 1ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನ ಗುಜರಿಗೆ: ಗಡ್ಕರಿ

newsics.com ನವದೆಹಲಿ: 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳು ಇದೇ ಏ. 1ರಿಂದ ರಸ್ತೆಯಿಂದ ಗುಜರಿಗೆ ಹೋಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ...

ತುಳುವಿಗೆ ರಾಜ್ಯ ಭಾಷೆ ಸ್ಥಾನ: ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ ಸರ್ಕಾರ

newsics.com ಮಂಗಳೂರು: ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ ನೀಡಬೇಕೆಂದು ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ...

ಕಾಡುಹಂದಿಯೆಂದು ನಾಯಿ ಮಾಂಸ ಮಾರಿದ ಯುವಕರು

newsics.com ಅಂಕೋಲಾ: ಕಾಡುಹಂದಿ ಮಾಂಸವೆಂದು ನಂಬಿಸಿ ಅಪರಿಚಿತ ಯುವಕರು ಸಿಕ್ಕ ಸಿಕ್ಕ ಪ್ರಾಣಿಗಳ ಮಾಂಸವನ್ನ ಮಾರಾಟ ಮಾಡಿರುವ ಘಟನೆ ಅಂಕೋಲಾದ ಮೊಗಟಾ, ಹಿಲ್ಲೂರು ಭಾಗದಲ್ಲಿ ನಡೆದಿದೆ. ಅಂಕೋಲಾದ ಗ್ರಾಮೀಣ ಭಾಗಗಳಿಗೆ ಭೇಟಿ ನೀಡುತ್ತಿದ್ದ ಯುವಕರ ತಂಡ,...
- Advertisement -
error: Content is protected !!