newsics.com
ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಸನ್ರೈಸರ್ಸ್ ಹೈದರಾಬಾದ್ ತಂಡ ಮೇಲುಗೈ ಸಾಧಿಸಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್ 13ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಟೇಬಲ್ ಟಾಪರ್ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದ್ರಾಬಾದ್ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ.
ನಿರ್ಣಾಯಕ ಹೋರಾಟದಲ್ಲಿ ಸನ್ರೈಸರ್ಸ್ ತಂಡ 10 ವಿಕೆಟ್ಗಳಿಂದ ಜಯ ದಾಖಲಿಸಿತು. ಹ್ಯಾಟ್ರಿಕ್ ಗೆಲುವು ದಾಖಲಿಸಿದ ಸನ್ರೈಸರ್ಸ್, ರನ್ರೇಟ್ ಲೆಕ್ಕಾಚಾರದಲ್ಲಿ ಆರ್ಸಿಬಿ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ, ಸಂದೀಪ್ ಶರ್ಮ (34ಕ್ಕೆ 3), ಶಾಬಾಜ್ ನದೀಂ (19ಕ್ಕೆ 2) ಹಾಗೂ ಜೇಸನ್ ಹೋಲ್ಡರ್ (25ಕ್ಕೆ 2) ದಾಳಿಗೆ ನಲುಗಿ 8 ವಿಕೆಟ್ಗೆ 149 ರನ್ ಸೇರಿಸಿತು. ಡೇವಿಡ್ ವಾರ್ನರ್ (85*ರನ್, 58 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ವೃದ್ಧಿಮಾನ್ ಸಾಹ (58*ರನ್, 45 ಎಸೆತ, 7 ಬೌಂಡರಿ, 1 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಫಲವಾಗಿ 17.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 151 ರನ್ ಗಳಿಸಿ ವಿಜಯ ಸಾಧಿಸಿತು.