Saturday, January 16, 2021

ಹೈದರಾಬಾದ್ ಎನ್ ಕೌಂಟರ್: ನಿವೃತ್ತ ನ್ಯಾಯಮೂರ್ತಿ ತನಿಖೆಗೆ ಒಲವು

ನವದೆಹಲಿ: ಹೈದರಾಬಾದ್ ಎನ್ ಕೌಂಟರ್  ಪ್ರಕರಣದ ಕುರಿತು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ  ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನವದೆಹಲಿಯಲ್ಲಿ  ನೆಲೆಸಿರುವ ಸುಪ್ರೀಂ ಕೋರ್ಟಿನ   ನಿವೃತ್ತ ನ್ಯಾಯಮೂರ್ತಿಯೊಬ್ಬರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ತೆಲಂಗಾಣ ಹೈ ಕೋರ್ಟ್ ಕೂಡ ಈ ಬಗ್ಗೆ ಗಮನ ಹರಿಸಿರುವುದು ತಿಳಿದಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಇದೇ ವೇಳೆ ಘಟನೆಯ ಕುರಿತು ಸ್ವತಂತ್ರ ವಿಶೇಷ ತನಿಖಾ ತಂಡ ರಚಿಸಬೇಕೇಂಬ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ  ನಾಳೆಗೆ ಮುಂದೂಡಿದೆ. ತೆಲಂಗಾಣ ಸರ್ಕಾರದ ಪರವಾಗಿ  ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ವಾದ ಮಂಡಿಸಿದರು

ಮತ್ತಷ್ಟು ಸುದ್ದಿಗಳು

Latest News

ವಾಟ್ಸಾಪ್ ಗೌಪ್ಯತೆ ನೀತಿ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು

newsics.com ನವದೆಹಲಿ: ವಾಟ್ಸಾಪ್ ಹಾಗೂ ಫೇಸ್ಬುಕ್'ನ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ ಹಿಂದೆ...

ಅಮೆರಿಕದಲ್ಲಿ ಪತ್ನಿ, ಮಗಳನ್ನು ಕೊಂದು ಗುಂಡಿಕ್ಕಿಕೊಂಡ ಭಾರತ ಮೂಲದ ವ್ಯಕ್ತಿ

newsics.com ನ್ಯೂಯಾರ್ಕ್: ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು, ಬಳಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನ್ಯೂಯಾರ್ಕ್ ಪೊಲೀಸರು ಈ ಮಾಹಿತಿ...

ರಾಜ್ಯದಲ್ಲಿ 708 ಮಂದಿಗೆ ಕೊರೋನಾ ಸೋಂಕು, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 708 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ.ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಈ...
- Advertisement -
error: Content is protected !!