ರಿಯಾದ್-ಬೆಂಗಳೂರು ವಿಮಾನದಲ್ಲಿ ಹೈಡ್ರಾಲಿಕ್ ಸೋರಿಕೆ

newsics.com ಮುಂಬೈ: ಇಥಿಯೋಪಿಯನ್ ಏರ್’ಲೈನ್ಸ್ ಕಾರ್ಗೋ ವಿಮಾನದಲ್ಲಿ ಹೈಡ್ರಾಲಿಕ್ ಸೋರಿಕೆ ಕಂಡುಬಂದಿದೆ.ಈ ವಿಮಾನ ರಿಯಾದ್’ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು. ಹೈಡ್ರಾಲಿಕ್ ಸೋರಿಕೆಯಿಂದ ಮುಂಬೈ ವಿಮಾನ ನಿಲ್ದಾಣದಲ್ಲೇ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.ವಿಮಾನವನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಮುನ್ನೆಚ್ಚರಿಕೆ ಕ್ರಮವಾಗಿ ನಿಲ್ದಾಣದಲ್ಲಿ ಮೂರು ಅಗ್ನಿಶಾಮಕ ದಳ, ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಟ್ರಂಪ್ ಸಂಸಾರದಲ್ಲಿ ಬಿರುಕು; ಮೆಲೆನಿಯಾ ಡಿವೋರ್ಸ್ ಸಾಧ್ಯತೆ … Continue reading ರಿಯಾದ್-ಬೆಂಗಳೂರು ವಿಮಾನದಲ್ಲಿ ಹೈಡ್ರಾಲಿಕ್ ಸೋರಿಕೆ