Thursday, June 17, 2021

ಆತಂಕದಿಂದ ನನಗೂ ಹಲವು ರಾತ್ರಿ ನಿದ್ದೆಯಿರಲಿಲ್ಲ: ತೆಂಡೂಲ್ಕರ್

newsics.com

ಮುಂಬೈ: ನನ್ನ 24 ವರ್ಷಗಳ ವೃತ್ತಿಜೀವನದ ಹೆಚ್ಚಿನ ಸಮಯ ಆತಂಕದ ಕ್ಷಣಗಳನ್ನು ಎದುರಿಸಿದ್ದೆ. ಹಲವು ರಾತ್ರಿ ನಿದ್ದೆಯೇ ಇರಲಿಲ್ಲ ಎಂದು ಕ್ರಿಕೆಟ್ ಜೀವಂತ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಪಂದ್ಯ ಪೂರ್ವದ ತಯಾರಿಯು ಪ್ರಮುಖ ಭಾಗವೆಂದು ಅರಿತುಕೊಳ್ಳುವ ಮೊದಲು ತಾನು ಬಹಳ ಆತ‌ಂಕಗೊಂಡಿದ್ದೆ. ಕೋವಿಡ್ ಸಮಯದಲ್ಲಿ ಅತ್ಯಂತ ಮುಖ್ಯವಾಗಿರುವ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ತೆಂಡೂಲ್ಕರ್, ಈ ಸಂಕಷ್ಟ ಸಮಯದಲ್ಲಿ ಸ್ವೀಕಾರಾರ್ಹತೆಯೇ ಮುಖ್ಯ ಎಂದಿದ್ದಾರೆ.

ನನ್ನ ಪ್ರಕಾರ ಪಂದ್ಯವು ಮೈದಾನಕ್ಕೆ ಪ್ರವೇಶಿಸುವ ಮೊದಲೇ ಆರಂಭವಾಗುತ್ತದೆ. ಆತಂಕದ ಮಟ್ಟಗಳು ತುಂಬಾ ಹೆಚ್ಚಾಗಿರುತ್ತವೆ. ಪಂದ್ಯಕ್ಕೆ ದೈಹಿಕವಾಗಿ ಸಿದ್ಧತೆ ಮಾಡುವುದರ ಜತೆಗೆ ನಾನು ಮಾನಸಿಕವಾಗಿ ಸಹ ನನ್ನನ್ನು ಸಿದ್ಧಪಡಿಸಿಕೊಳ್ಳಬೇಕು ಎಂಬುದನ್ನು ಕಾಲಕ್ರಮೇಣ ನಾನು ಅರಿತುಕೊಂಡೆ ಎಂದು ಅನಾಕಾಡೆಮಿ ಆಯೋಜಿಸಿದ್ದ ಸಂವಾದದಲ್ಲಿ ಸಚಿನ್ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಅರಾವಳಿ ಪರ್ವತ ಭೂಮಿ ಅತಿಕ್ರಮಣ ತೆರವು: ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

newsics.com ನವದೆಹಲಿ: ಅರಾವಳಿ ಪರ್ವತ ವ್ಯಾಪ್ತಿಯ ಭೂ ಪ್ರದೇಶದಲ್ಲಿ ನಿರ್ಮಿಸಲಾಗಿರುವ 10000 ವಸತಿ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಯಾವುದೇ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೂನ್ ಏಳರಂದು...

ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ತಡೆ

newsics.com ಬೆಂಗಳೂರು: ರಾಜ್ಯ ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ 2020-21 ರ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 15 ದಿನಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ಸರ್ಕಾರ ಹೇಳಿದ್ದು, ಈ...

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೂರು ನೀಡಿದ ಯೋಗೇಶ್ವರ್

newsics.com ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಕೂಡ ರಾಜ್ಯ ಬಿಜೆಪಿ ನಾಯಕರ ಜತೆ ಸಮಾಲೋಚನೆ ಮುಂದುವರಿಸಿದ್ದಾರೆ. ಈ ಮಧ್ಯೆ  ಅರುಣ್...
- Advertisement -
error: Content is protected !!